HEALTH TIPS

ಮೀಂಜ ಕಳೆದುಕೊಂಡ ಎಡರಂಗ: ಪೈವಳಿಕೆ, ಮಂಗಲ್ಪಾಡಿಲ್ಲಿ ಯುಡಿಎಫ್ ಅಧಿಕಾರಕ್ಕೆ

ಉಪ್ಪಳ: ಜಿಲ್ಲೆಯ ಕೆಲವು ಗ್ರಾಮ ಪಂಚಾಯತ್‍ಗಳಲ್ಲಿ ಎಡರಂಗದ ಆಡಳಿತ ನಷ್ಟಗೊಂಡಿರುವಂತೆಯೇ ಮೀಂಜದಲ್ಲೂ ಎಡರಂಗ ಆಡಳಿತ ಕೈತಪ್ಪಿದೆ.  ಇಲ್ಲಿ ಕಳೆದಬಾರಿ ಸಿಪಿಐಗೆ 3 ಸೀಟು ಲಭಿಸಿದ್ದು, ಎಡರಂಗಕ್ಕೆ ಒಟ್ಟು 5 ಸ್ಥಾನ ಲಭಿಸಿತ್ತು.  ಆದರೆ ಈ ಬಾರಿ  ಸಿಪಿಎಂಗೆ ಒಂದು ಸ್ಥಾನ ಮಾತ್ರ ಲಭಿಸಿದೆ. ಕಳೆದಬಾರಿ ಆರು ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ 1 ಸೀಟು ಹೆಚ್ಚಿಸಿಕೊಂಡಿದೆ. ಈ ಬಾರಿ ಇಲ್ಲಿ ಯುಡಿಎಫ್ 9 ಸೀಟು ಗಳಿಸಿದ್ದು, ಆಡಳಿತ ಯುಡಿಎಫ್ ಪಾಲಾಗಿದೆ.  

ಮಂಗಲ್ಪಾಡಿ ಪಂಚಾಯತಿಯಲ್ಲೂ ಯುಡಿಎಫ್ ಅಧಿಕಾರ ಪಡೆದಿದೆ. ಇಲ್ಲಿ ಕಳೆದಬಾರಿ ಕಾಂಗ್ರೆಸ್ ಸೇರಿ ಯುಡಿಎಫ್ ಅಧಿಕಾರದಲ್ಲಿದ್ದರೆ ಈ ಬಾರಿ ಕೇವಲ ಮುಸ್ಲಿಂ ಲೀಗ್ ಮಾತ್ರವೇ ಗೆದ್ದು ಪಂಚಾಯತಿ ಅಧಿಕಾರವನ್ನು ಭದ್ರಪಡಿಸಿದೆ. 19 ವಾರ್ಡ್‍ಗಳಲ್ಲಿ ಮುಸ್ಲಿಂ ಲೀಗ್ ಗೆದ್ದಿದೆ. ಇದರಲ್ಲಿ  1 ವಾರ್ಡ್ ನಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ಪಂಚಾಯತಿಯ 13 ಮತ್ತು 17ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಲೀಗ್‍ನ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದು ಆದರೆ ಇಲ್ಲಿ ಎರಡೂ ಕಡೆ ಕಾಂಗ್ರೆಸ್ ಸೋಲನುಭವಿಸಿದೆ. ಇದರಿಂದಾಗಿ ಕಳೆದಬಾರಿ ಇದ್ದ 2 ಸ್ಥಾನವ ನ್ನು ಈ ಬಾರಿ ಕಾಂಗ್ರೆಸ್ ಕಳೆದುಕೊಂಡಿದೆ. ಇಲ್ಲಿ ಬಿಜೆಪಿ 3 ಸೀಟಿನಲ್ಲಿ ಜಯಗಳಿಸಿದೆ. ಎಡರಂಗ 2ರಲ್ಲಿ ಗೆಲುವು ಸಾಧಿಸಿದೆ. ಕಳೆದ 50 ವರ್ಷಗಳಿಂದ ಇಲ್ಲಿ ಯುಡಿಎಫ್ ಅಧಿಕಾರದಲ್ಲಿದ್ದು ಈ ಬಾರಿ ಲೀಗ್ ತನ್ನ ಸ್ವಂತ ನೆಲೆಯಲ್ಲಿ ಅಧಿಕಾರ ಪಡೆದುಕೊಂಡಿದೆ.

ಪೈವಳಿಕೆ ಪಂ.ನಲ್ಲಿ ಒಟ್ಟು ಇರುವ 21 ವಾರ್ಡ್‍ಗಳ ಪೈಕಿ ಯುಡಿಎಫ್ 9 ರಲ್ಲಿ ಜಯಗಳಿಸಿ ಅತ್ಯಧಿಕ ಸ್ಥಾನಗಳಿಸಿದ ಪಕ್ಷವಾಗಿ ಹೊರಹೊಮ್ಮಿದೆ. ಎಡರಂಗ 6 ಸ್ಥಾನ ಗಳಿಸಿದೆ. ಬಿಜೆಪಿ 5, ಸ್ವತಂತ್ರ ಅಭ್ಯರ್ಥಿಯೋರ್ವರು ಜಯಗಳಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries