ಪೆರ್ಲ: ಪೆರ್ಲ ಪೇಟೆಯಲ್ಲಿ ಹುಚ್ಚುನಾಯಿ ಕಡಿತದಿಂದ ಎಳೆಯ ಬಾಲಕ ಸೇರಿದಂತೆ ಹಲವರು ಗಾಯ ಗೊಂಡಿದ್ದಾರೆ. ಪೇಟೆಯಲ್ಲಿ ಮಧ್ಯಾಹ್ನ ಏಕಾಏಕಿ ಧಾವಿಸಿ ಬಂದ ನಾಯಿ ಬಾಲಕನನ್ನು ಅಟ್ಟಾಡಿಸಿ ಕಚ್ಚಿದ್ದು, ನಂತರ ಎದುರು ಸಿಕ್ಕಿದವರನ್ನು ಕಡಿದು ಗಾಯಗೊಳಿಸಿದೆ. ನಂತರ ಹುಚ್ಚು ನಾಯಿಯನ್ನು ಸಾರ್ವಜನಿಕರು ಬಡಿದು ಕೊಂದಿದ್ದು, ಇದರಿಂದ ಮತ್ತಷ್ಟು ಜನರನ್ನುಕಡಿಯುವುದು ತಪ್ಪಿದೆ. ನಾಡಿನಾದ್ಯಂತ ಬೀದಿನಾಯಿ ವ್ಯಾಪಕಗೊಂಡಿದ್ದು, ಮಹಿಳೆಯರು, ಮಕ್ಕಳು, ವೃದ್ಧರು ಆತಂಕಕ್ಕೀಡಾಗಿದ್ದಾರೆ.

