ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಕಾಸರಗೋಡು ನಗರಸಭೆಯ ಒಟ್ಟು 39 ವಾರ್ಡ್‍ಗಳ ಪೈಕಿ 24 ವಾರ್ಡ್‍ಗಳಲ್ಲಿ,ಐಕ್ಯರಂಗ, 12 ವಾರ್ಡ್‍ಗಳಲ್ಲಿ ಎನ್‍ಡಿಎ, ಎರಡು ವಾರ್ಡ್‍ಗಳಲ್ಲಿ ಸ್ವತಂತ್ರರು ಹಾಗೂ ಒಂದು ವಾರ್ಡ್‍ನಲ್ಲಿ ಎಡರಂಗ ಗೆಲುವು ಸಾಧಿಸಿದೆ. ಕಳೆದ ಬಾಗಿಂತ ಎನ್‍ಡಿಎಗೆ ಎರಡು ಸೀಟು ಕುಸಿತ ಕಂಡಿದೆ.
ಕಾಞಂಗಾಡ್ ನಗರಸಭೆಯಲ್ಲಿ ಐಕ್ಯರಂಗ ಮತ್ತು ಎಡರಂಗ ತಲಾ 20 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದ್ದರೆ, ಎನ್‍ಡಿಎ ನಾಲ್ಕು ವಾರ್ಡ್‍ಗಳಲ್ಲಿ ಮತ್ತು ಸ್ವತಂತ್ರ ಅಭ್ಯರ್ಥಿಗಳು ಮೂರು ವಾರ್ಡ್‍ಗಳಲ್ಲಿ ಗೆದ್ದಿದ್ದಾರೆ. ನೀಲೇಶ್ವರಂ ನಗರಸಭೆಯ 34 ವಾರ್ಡ್‍ಗಳಲ್ಲಿ ಎಡರಂಗ 20 ವಾರ್ಡ್‍ಗಳಲ್ಲಿ ಮತ್ತು ಐಕ್ಯರಂಗ 13 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದ್ದರೆ, ಒಂದು ವಾರ್ಡ್‍ನಲ್ಲಿ ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ.
ಮಂಜೇಶ್ವರ ಬ್ಲಾಕ್ ಪಂಚಾಯತ್‍ನ 16 ವಾರ್ಡ್‍ಗಳಲ್ಲಿ 11 ಐಕ್ಯರಂಗ, ಮೂರು ವಾರ್ಡುಗಳಲ್ಲಿ ಎನ್‍ಡಿಎ ಮತ್ತು ಎರಡು ವಾರ್ಡುಗಳಲ್ಲಿ ಎಡರಂಗ ಗೆಲುವು ಸಾಧಿಸಿದೆ.
ಜಿಲ್ಲೆಯ 38 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಪೂರ್ಣಗೊಂಡಾಗ, ಐಕ್ಯರಂಗ 17 ಪಂಚಾಯಿತಿಗಳಲ್ಲಿ, ಎಡರಂಗ 13 ಪಂಚಾಯಿತಿಗಳಲ್ಲಿ ಮತ್ತು ಎನ್‍ಡಿಎ ಮೂರು ಪಂಚಾಯಿತಿಗಳಲ್ಲಿ ಗೆಲುವು ಸಾಧಿಸಿದೆ. ಬದಿಯಡ್ಕ ಗ್ರಾಮ ಪಂಚಾಯಿತಿಯಲ್ಲಿ ಐಕ್ಯರಂಗ ಮತ್ತು ಎನ್‍ಡಿಎ ತಲಾ ಹತ್ತು ಸ್ಥಾನಗಳನ್ನು ಗಳಿಸಿವೆ. ಬೆಳ್ಳೂರಿನಲ್ಲಿ ಎನ್‍ಡಿಎ ಮತ್ತು ಸ್ವತಂತ್ರರು ತಲಾ ಆರು ಸ್ಥಾನಗಳನ್ನು ಗಳಿಸಿದ್ದಾರೆ. ದೇಲಂಪಾಡಿ ಗ್ರಾಮ ಪಂಚಾಯಿತಿಯಲ್ಲಿ ಎಡರಂಗ ಮತ್ತು ಎನ್‍ಡಿಎ ತಲಾ ಐದು ಸ್ಥಾನಗಳನ್ನು ಗಳಿಸಿ ಸಮಬಲ ಸಾಧಿಸಿವೆ. ಪುಲ್ಲೂರ್ ಪೆರಿಯ ಮತ್ತು ಪುತ್ತಿಗೆ ಗ್ರಾಮ ಪಂಚಾಯತ್‍ಗಳಲ್ಲಿ ಎಡರಂಗ ಮತ್ತು ಐಕ್ಯರಂಗ ಕ್ರಮವಾಗಿ ಒಂಬತ್ತು ಮತ್ತು ಐದು ಸ್ಥಾನಗಳನ್ನು ಗಳಿಸಿ ಸಮಬಲ ಸಾಧಿಸಿದೆ.


