ತಿರುವನಂತಪುರಂ: ಪುರುಷ ಆಯೋಗಕ್ಕಾಗಿ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದೆ ಎಂದು ರಾಹುಲ್ ಈಶ್ವರ್ ಹೇಳಿದ್ದಾರೆ.
ಪೋಲೀಸ್ ವರದಿ ಲಭಿಸಿಲ್ಲ ಎಂದು ಸುಳ್ಳು ಹೇಳುವ ಮೂಲಕ ತನ್ನನ್ನು ಹೆಚ್ಚು ದಿನಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು. ಶಬರಿಮಲೆ ಚಿನ್ನದ ದರೋಡೆಯನ್ನು ಮುಚ್ಚಿಹಾಕಲು ಮುಖ್ಯಮಂತ್ರಿ ಮತ್ತು ಇತರರು ಚುನಾವಣಾ ಪ್ರಚಾರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯವನ್ನು ಎತ್ತಿದರು. ತಾನು ಹೊರಗಿದ್ದರೆ, ಅದರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಬಲವಾದ ಪ್ರಚಾರ ಮಾಡುತ್ತಾರೆ ಎಂಬ ನಂಬಿಕೆಯೊಂದಿಗೆ ಚುನಾವಣೆಯವರೆಗೆ ತನ್ನನ್ನು ಜೈಲಿನಲ್ಲಿ ಬಂಧಿಯಾಗಿಸಲಾಯಿತು ಎಂದು ರಾಹುಲ್ ಈಶ್ವರ್ ಹೇಳಿದರು.
ಜೈಲಿನಿಂದ ಬಿಡುಗಡೆಯಾದ ನಂತರ ತಿರುವನಂತಪುರದಲ್ಲಿ ಮಾಧ್ಯಮಗಳೊಂದಿಗೆ ರಾಹುಲ್ ಮಾತನಾಡುತ್ತಿದ್ದರು.
'ಸ್ವಾಮಿ ಅಯ್ಯಪ್ಪ, ಮಹಾತ್ಮ ಗಾಂಧಿ, ಹಾಗೂ ತನ್ನ ಇಬ್ಬರು ಮಕ್ಕಳಾಣೆ ಸತ್ಯ, ನಾನು ಹೇಳುತ್ತಿರುವ ಈ ಎಲ್ಲಾ ವಿಷಯಗಳು ಸತ್ಯವೆಂದು ನಾನು ಪ್ರಮಾಣ ಮಾಡುತ್ತೇನೆ; ನೀವು ಎಂದಿಗೂ ಸುಳ್ಳಿನಿಂದ ಸುಳ್ಳನ್ನು ಗೆಲ್ಲಲು ಸಾಧ್ಯವಿಲ್ಲ. ನೀವು ಸತ್ಯದಿಂದ ಮಾತ್ರ ಗೆಲ್ಲಬಹುದು. ಕತ್ತಲನ್ನು ಕತ್ತಲೆಯಿಂದ ಸೋಲಿಸಲು ಸಾಧ್ಯವಿಲ್ಲ, ಅದನ್ನು ಬೆಳಕಿನಿಂದ ಮಾತ್ರ ಸೋಲಿಸಬಹುದು. ದ್ವೇಷವನ್ನು ಪ್ರೀತಿ ಮತ್ತು ಗೌರವದಿಂದ ಮಾತ್ರ ಸೋಲಿಸಬಹುದು. ಪೆÇಲೀಸರು ನನಗೆ ಯಾವುದೇ ನೋಟಿಸ್ ನೀಡದೆ ನನ್ನನ್ನು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಮಾತನಾಡಬೇಡಿ ಎಂದು ನನಗೆ ಹೇಳಿದ್ದರಿಂದ ನಾನು ಹೆಚ್ಚು ಹೇಳುತ್ತಿಲ್ಲ.ಗುರುವಾರವೇ ನನಗೆ ಜಾಮೀನು ಸಿಗಬೇಕಿತ್ತು. ಸರ್ಕಾರದ ಪರವಾಗಿ ಹಾಜರಾದ ವಕೀಲರು ಸುಳ್ಳು ಹೇಳಿ ಪೆÇಲೀಸ್ ವರದಿ ಬಂದಿಲ್ಲ ಎಂದು ಹೇಳಿದರು. ಚುನಾವಣೆ ಮುಗಿಯುವವರೆಗೂ ನನ್ನನ್ನು ಹೇಗಾದರೂ ಒಳಗೆ ಇಡಬೇಕಿತ್ತು.ಶಬರಿಮಲೆ ಚಿನ್ನದ ದರೋಡೆಯ ವಿರುದ್ಧ ಮುಖ್ಯಮಂತ್ರಿ ಮತ್ತು ಇತರರು ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯವನ್ನು ಎತ್ತಿದರು. ನಾನು ಹೊರಗಿದ್ದರೆ, ಸಾಮಾಜಿಕ ಮಾಧ್ಯಮದಲ್ಲಿ ಅದರ ವಿರುದ್ಧ ಬಲವಾದ ಪ್ರಚಾರ ಮಾಡುವೆ ಎಂದು ಅವರಿಗೆ ತಿಳಿದಿತ್ತು, ಆದ್ದರಿಂದ ಅವರು ಚುನಾವಣೆ ಮುಗಿಯುವವರೆಗೂ ನನ್ನನ್ನು ಒಳಗೆ ಇಟ್ಟರು.
ನಾನು ಪುರುಷ ಆಯೋಗದ ಪರವಾಗಿ ಹೋರಾಡಲು ಕಾರಣವೆಂದರೆ ನನ್ನನ್ನು ಸುಳ್ಳು ದೂರಿನ ಮೇಲೆ ಬಂಧಿಸಿ ಸುಳ್ಳು ಆರೋಪ ಹೊರಿಸಲಾಯಿತು.
ಈ ರೀತಿಯ ಯಾವುದೇ ಪುರುಷನ ವಿರುದ್ಧ ಪ್ರಕರಣ ದಾಖಲಿಸಬಹುದು. ನಾನು ಪುರುಷ ಆಯೋಗಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸಿದ್ದೇನೆ' ಎಂದು ರಾಹುಲ್ ಈಶ್ವರ್ ಹೇಳಿದರು.
ಅತ್ಯಾಚಾರ ಪ್ರಕರಣದಲ್ಲಿ ದೂರುದಾರರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ರಾಹುಲ್ ಈಶ್ವರ್ಗೆ ನ್ಯಾಯಾಲಯ ನಿನ್ನೆ ಜಾಮೀನು ನೀಡಿದೆ.
ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದ ಸ್ತ್ರೀಯ ಹೆಸರೆತ್ತಿದ ಕಾರಣದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ರಾಹುಲ್ ಈಶ್ವರ್ ಅವರನ್ನು 16 ದಿನಗಳ ನಂತರ ಬಿಡುಗಡೆ ಮಾಡಲಾಗಿದೆ. ತಿರುವನಂತಪುರಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ರಾಹುಲ್ ಈಶ್ವರ್ಗೆ ಷರತ್ತುಗಳೊಂದಿಗೆ ಜಾಮೀನು ನೀಡಿದೆ.

