"ಮುಂದೊಂದು ದಿನ ಕಾಂಗ್ರೆಸ್ ಕಾರ್ಯಕರ್ತರೇ ತಮ್ಮ ನಾಯಕತ್ವವನ್ನು ಪ್ರಶ್ನಿಸಲಿದ್ದಾರೆ" ಎಂದು ಚುನಾವಣಾ ಸುಧಾರಣೆಗಳ ಬಗೆಗಿನ ಲೋಕಸಭಾ ಚರ್ಚೆಯ ವೇಳೆ ಅಭಿಪ್ರಾಯಪಟ್ಟರು.
ಆರೆಸ್ಸೆಸ್ ಸರ್ಕಾರಿ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, "ಆರೆಸ್ಸೆಸ್ ಸಿದ್ಧಾಂತದ ವ್ಯಕ್ತಿಗಳು ಸಂವಿಧಾನಾತ್ಮಕ ಹುದ್ದೆಗಳನ್ನು ಹೊಂದುವುದನ್ನುನಿಷೇಧಿಸುವ ಕಾನೂನು ದೇಶದಲ್ಲಿದೆಯೇ? ಎಂದು ಖಾರವಾಗಿ ಪ್ರಶ್ನಿಸಿದರು. "ಪ್ರಧಾನಿ ಆರೆಸ್ಸೆಸ್ ನವರು ಅಂತೆಯೇ ಗೃಹಸಚಿವರು ಕೂಡಾ" ಎಂದು ಸಮರ್ಥಿಸಿಕೊಂಡರು.
"ರಾಷ್ಟ್ರಕ್ಕಾಗಿ ಬದುಕುವುದು ಮತ್ತು ರಾಷ್ಟ್ರಕ್ಕಾಗಿ ಸಾಯುವುದೇ ಆರೆಸ್ಸೆಸ್ ಸಿದ್ಧಾಂತ. ಭಾರತವನ್ನು ಮತ್ತಷ್ಟು ಸದೃಢ ಮತ್ತು ಸಮೃದ್ಧಗೊಳಿಸುವುದೇ ಅದರ ಉದ್ದೇಶ" ಎಂದ ಅವರು, ನಾನು 10 ವರ್ಷದವನಿದ್ದಾಗಲೇ "ಅಸ್ಸಾಂ ಕಿ ಗಲಿಯಾನ್ ಸುನಿ ಹೇ, ಇಂದಿರಾ ಗಾಂಧಿ ಖೂನಿ ಹೇ" ಎಂಬ ಘೋಷಣೆ ಕೂಗಿದ್ದೆ ಎಂದು ಬಾಲ್ಯವನ್ನು ನೆನಪಿಸಿಕೊಂಡರು.
ವಿರೋಧ ಪಕ್ಷಗಳು ಹಿನ್ನಡೆ ಅನುಭವಿಸಿದಾಗಲೆಲ್ಲ ಬೇರೆಯವರನ್ನು ದೂಷಿಸುತ್ತವೆ ಎಂದು ತಿರುಗೇಟು ನೀಡಿದರು.

