ಮೆಲ್ಬರ್ನ್: ಸಿಡ್ನಿಯ ಬೋಂಡಿ ಬೀಚ್ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಗಾಯಗೊಂಡ 40 ಮಂದಿಯ ಪೈಕಿ ಮೂವರು ಭಾರತದ ವಿದ್ಯಾರ್ಥಿಗಳಿದ್ದಾರೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
ಈ ಪೈಕಿ ಇಬ್ಬರು ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು 'ಆಸ್ಟ್ರೇಲಿಯಾ ಟುಡೆ' ಪತ್ರಿಕೆ ವರದಿ ಮಾಡಿದೆ.
ಗಾಯಗೊಂಡ ಭಾರತದ ವಿದ್ಯಾರ್ಥಿಗಳ ಹೆಸರು ಇನ್ನೂ ಬಹಿರಂಗಗೊಂಡಿಲ್ಲ.
ಗುಂಡಿನ ದಾಳಿಯಿಂದ ಗಾಯಗೊಂಡ ಭಾರತದ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸದ್ಯದ ಪರಿಸ್ಥಿತಿ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ ಎಂದು ಅದು ಹೇಳಿದೆ.
ಪ್ರವಾಸಿ ತಾಣ ಬೋಂಡಿ ಬೀಚ್ನಲ್ಲಿ 'ಹನುಕ್ಕಾ ಯಹೂದಿ ಹಬ್ಬ'ದ ಪ್ರಾರಂಭೋತ್ಸವಕ್ಕಾಗಿ ಸೇರಿದ್ದ ಅಪಾರ ಸಂಖ್ಯೆಯ ಜನರ ಮೇಲೆ ನವೀದ್ ಅಕ್ರಮ್ (24) ಹಾಗೂ ಆತನ 50 ವರ್ಷದ ತಂದೆ ಗುಂಡಿನ ದಾಳಿ ನಡೆಸಿದ್ದರು.
ಬೋಂಡಿ ಬೀಚ್ ಹತ್ಯಾಕಾಂಡ: ಗನ್ ಹಿಡಿದ ಉಗ್ರನನ್ನು ಆತ ಬರಿಗೈಯಲ್ಲೇ ಮಣಿಸಿದ!
ಘಟನೆಯಲ್ಲಿ 10 ವರ್ಷದ ಮಗು ಸೇರಿದಂತೆ ಕನಿಷ್ಠ 15 ಮಂದಿ ಸಾವಿಗೀಡಾಗಿದ್ದಾರೆ. ಗಾಯಗೊಂಡ ಐವರ ಪರಿಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಇಬ್ಬರು ಪೊಲೀಸ್ ಅಧಿಕಾರಿಗಳ ಪರಿಸ್ಥಿತಿಯೂ ಗಂಭೀರವಾಗಿದೆ.

