ಇದಕ್ಕೆ ದುಬಾರಿ ಸ್ಮಾರ್ಟ್ ಇಯರ್‌ಬಡ್‌ಗಳ ಅಗತ್ಯವಿಲ್ಲ, ಸಾಮಾನ್ಯ ವೈರ್ಡ್ ಅಥವಾ ವೈರ್‌ಲೆಸ್ ಹೆಡ್‌ಫೋನ್‌ಗಳಿದ್ದರೆ ಸಾಕು.
ಹೆಡ್‌ಫೋನ್ ಬಳಸಿ ಅನುವಾದ ಪಡೆಯುವುದು ಹೇಗೆ? ನಿಮ್ಮ ಹೆಡ್‌ಫೋನ್ ಅನ್ನು ಫೋನ್‌ಗೆ ಕನೆಕ್ಟ್ ಮಾಡಿದ ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಿ:
- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಟ್ರಾನ್ಸ್‌ಲೇಟ್ (Google Translate) ಆಯಪ್ ತೆರೆಯಿರಿ.
- ಮೇಲ್ಭಾಗದ ಎಡಭಾಗದಲ್ಲಿ ನೀವು ಮಾತನಾಡುವ ಭಾಷೆ ಮತ್ತು ಬಲಭಾಗದಲ್ಲಿ ನೀವು ಅರ್ಥಮಾಡಿಕೊಳ್ಳಬೇಕಾದ ಭಾಷೆಯನ್ನು ಆಯ್ಕೆ ಮಾಡಿ.
- ಪರದೆಯ ಕೆಳಗಿನ ಎಡ ಮೂಲೆಯಲ್ಲಿರುವ ಕನ್ವರ್ಸೇಶನ್ (Conversation) ಆಯ್ಕೆಯನ್ನು ಕ್ಲಿಕ್ ಮಾಡಿ.
- ಬಳಿಕ ಬರುವ ಪ್ರಾಂಪ್ಟ್‌ನಲ್ಲಿ ಸ್ಟಾರ್ಟ್ (Start) ಬಟನ್ ಒತ್ತಿರಿ.
- ಫೋನ್ ಅನ್ನು ಮಾತನಾಡುತ್ತಿರುವ ವ್ಯಕ್ತಿಯ ಹತ್ತಿರ ಹಿಡಿಯಿರಿ. ಅವರು ಮಾತನಾಡುತ್ತಿದ್ದರೆ, ಆಯಪ್ ಅದನ್ನು ಆಲಿಸಿ ತಕ್ಷಣವೇ ಅನುವಾದಿಸಿದ ಧ್ವನಿಯನ್ನು ನಿಮ್ಮ ಹೆಡ್‌ಫೋನ್‌ನಲ್ಲಿ ಪ್ಲೇ ಮಾಡುತ್ತದೆ.
ಉತ್ತಮ ಫಲಿತಾಂಶಕ್ಕಾಗಿ ಈ ಸಲಹೆಗಳನ್ನು ಪಾಲಿಸಿ:
- ನಿಶ್ಯಬ್ದವಾಗಿರುವ ಪ್ರದೇಶದಲ್ಲಿ ಈ ಫೀಚರ್ ಬಳಸಲು ಪ್ರಯತ್ನಿಸಿ.
- ಮಾತನಾಡುವ ವ್ಯಕ್ತಿಯ ಬಾಯಿಯ ಹತ್ತಿರ ಫೋನ್ ಹಿಡಿಯಿರಿ.
- ಅನುವಾದ ಸ್ಪಷ್ಟವಾಗಿರಲು ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ಸ್ಥಿರವಾಗಿರಲಿ.
- ಒಂದೇ ಬಾರಿಗೆ ಹಲವು ವ್ಯಕ್ತಿಗಳು ಮಾತನಾಡದಂತೆ ಗಮನ ಹರಿಸಿ.
- ಒಂದು ವೇಳೆ ಅನುವಾದ ತಪ್ಪಾಗಿ ಕೇಳಿಸಿದರೆ, ಎದುರಿಗಿರುವವರಿಗೆ ನಿಧಾನವಾಗಿ ಮಾತನಾಡಲು ತಿಳಿಸಿ.
ಗೂಗಲ್ ಮತ್ತು ಆಪಲ್ ಲೈವ್ ಟ್ರಾನ್ಸ್‌ಲೇಟ್ ನಡುವಿನ ವ್ಯತ್ಯಾಸವೇನು? ಗೂಗಲ್ ಟ್ರಾನ್ಸ್‌ಲೇಟ್‌ನ ಪ್ರಮುಖ ಅನುಕೂಲವೆಂದರೆ ಇದರ ನಮ್ಯತೆ (Flexibility). ಆಪಲ್‌ನ ಲೈವ್ ಟ್ರಾನ್ಸ್‌ಲೇಷನ್ ಕೆಲವು ನಿರ್ದಿಷ್ಟ ಸಾಧನಗಳಿಗೆ ಸೀಮಿತವಾಗಿದ್ದರೆ, ಗೂಗಲ್ ಯಾವುದೇ ಬ್ರ್ಯಾಂಡ್‌ನ ಹೆಡ್‌ಫೋನ್‌ಗಳನ್ನು ಬಳಸಲು ಅವಕಾಶ ನೀಡುತ್ತದೆ. ಗೂಗಲ್ ಆಯಪ್ ಪ್ರಸ್ತುತ ಬೀಟಾ ಮೋಡ್‌ನಲ್ಲಿ 70ಕ್ಕೂ ಹೆಚ್ಚು ಭಾಷೆಗಳನ್ನು ಬೆಂಬಲಿಸುತ್ತದೆ ಮತ್ತು ಮಾತನಾಡುವ ವ್ಯಕ್ತಿಯ ಧ್ವನಿಯ ಧಾಟಿ ಹಾಗೂ ವಿರಾಮ ಚಿಹ್ನೆಗಳನ್ನು (Punctuation) ಕಾಪಾಡಿಕೊಳ್ಳುತ್ತದೆ.

