ಬದಿಯಡ್ಕ: ಕುಂಬಳೆ ಸೀಮೆಯ 5ನೇ ಪ್ರಮುಖ ದೇವಸ್ಥಾನವಾಗಿರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಏಪ್ರಿಲ್ 17 ರಿಂದ 26 ವರೆಗೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ, ಕ್ಷೇತ್ರದಲ್ಲಿ ನೆಲೆಯಾಗಿರುವ ದೈವೀಕ ಶಕ್ತಿಗಳ ಕುರಿತಾದ ಭಕ್ತಿಗೀತೆ ರಚನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯ ನಿಯಮಾಳಿಗಳು ಈ ರೀತಿ ಇದೆ. ಓರ್ವ ಸ್ಪರ್ಧೆ ಗರಿಷ್ಠ 3 ಗೀತೆಗಳನ್ನು ಕಳುಹಿಸಬಹುದು. ಗೀತೆಗಳು ರಾಗಸಂಯೋಜಿಸಿ ಹಾಡುವಂತಿರಬೇಕು. ತುಳು, ಕನ್ನಡ, ಮಲೆಯಾಳ ಇತ್ಯಾದಿ ಯಾವುದೇ ಭಾಷೆಯಲ್ಲಿರಬಹುದು, ಆದರೆ ಕನ್ನಡ ಲಿಪಿಯಲ್ಲಿ ಬರೆದು ಕಳಿಸಬೇಕು. ಯಾವುದೇ ವಯೋಮಾನದ ಮಿತಿಯಿರುವುದಿಲ್ಲ. ವಿಜೇತರಿಗೆ ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿ ಗಣ್ಯರಿಂದ ಸೂಕ್ತ ಗೌರವ ನೀಡಲಾಗುವುದು. ಗೀತೆಗಳ ಮೂಲಹಕ್ಕು ಕವಿಗಳದ್ದೇ ಆಗಿರುತ್ತದೆ. ಅಗತ್ಯಾನುಸಾರ ಪ್ರಕಟಿಸುವ, ಪ್ರಚುರಪಡಿಸುವ ಹಕ್ಕು ಕ್ಷೇತ್ರದ ಸಮಿತಿಗೂ ಇರುತ್ತದೆ. ಕವಿಗಳ ಹೆಸರು ಪ್ರತ್ಯೇಕ ಪುಟದಲ್ಲಿ ಬರೆದಿರಬೇಕು. ಗೀತೆಗಳನ್ನು ಬರೆದು/ಟೈಪಿಸಿ, ಡಿ. 15ರ ಒಳಗಾಗಿ 9633876833 ಈ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕೆಂದು ಕ್ಷೇತ್ರದ ಬ್ರಹ್ಮಕಲಶೋತ್ಸವ ಪ್ರಚಾರಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

