ಅರಿಶಿನದ ಅತಿಯಾದ ಸೇವನೆಯು ಹೊಟ್ಟೆ ನೋವು, ಉಬ್ಬುವುದು, ಮಲಬದ್ಧತೆ ಮತ್ತು ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಅರಿಶಿನದಲ್ಲಿರುವ ಆಕ್ಸಲೇಟ್ ಅಂಶವು ಕ್ಯಾಲ್ಸಿಯಂನೊಂದಿಗೆ ಸೇರಿಕೊಂಡು ಮೂತ್ರಪಿಂಡದ ಕಲ್ಲುಗಳನ್ನು ಉಂಟುಮಾಡುತ್ತದೆ.
ಅರಿಶಿನದ ಅತಿಯಾದ ಸೇವನೆಯು ದೇಹದ ಕಬ್ಬಿಣದಂಶವನ್ನು ಹೀರಿಕೊಳ್ಳುವ ಸಾಮಥ್ರ್ಯವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ಕಬ್ಬಿಣದ ಮಟ್ಟದಲ್ಲಿ ಇಳಿಕೆಗೆ ಕಾರಣವಾಗಬಹುದು.
ಅರಿಶಿನವು ಕೆಲವು ಜನರಲ್ಲಿ ಅಲರ್ಜಿಯನ್ನು ಉಂಟುಮಾಡಬಹುದು. ಇದು ತುರಿಕೆ, ದದ್ದುಗಳು ಮತ್ತು ಉಸಿರಾಟದ ತೊಂದರೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅರಿಶಿನವು ರಕ್ತ ಹೆಪ್ಪುಗಟ್ಟುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ಆಸ್ಪಿರಿನ್ನಂತಹ ಔಷಧಿಗಳನ್ನು ತೆಗೆದುಕೊಳ್ಳುವ ಜನರಲ್ಲಿ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ.
ಗರ್ಭಿಣಿಯರು ಅತಿಯಾಗಿ ಅರಿಶಿನ ಸೇವಿಸುವುದರಿಂದ ಭ್ರೂಣ ಮತ್ತು ತಾಯಿಗೆ ಹಾನಿಕಾರಕವಾಗಿದೆ.
ಅರಿಶಿನವು ಕೆಲವು ಜನರಲ್ಲಿ ಅಲರ್ಜಿಯನ್ನು ಉಂಟುಮಾಡಬಹುದು.

