ಜೆರುಸಲೇಮ್: ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ಸಂಘಟನೆಯ ಉನ್ನತ ಕಮಾಂಡರ್ ರಯೀದ್ ಸಾದ್ ಮೃತಪಟ್ಟಿರುವುದನ್ನು ಹಮಾಸ್ ಭಾನುವಾರ ಖಚಿತಪಡಿಸಿದೆ.
'ಸಾದ್, ಶಸ್ತ್ರಾಸ್ತ್ರಗಳು ಹಾಗೂ ಸೇನೆಯ ವಿವಿಧ ಉಪಕರಣಗಳ ತಯಾರಿಕೆ ಘಟಕದ ಕಮಾಂಡರ್ ಆಗಿದ್ದ' ಎಂದೂ ಹಮಾಸ್ ತಿಳಿಸಿದೆ.
'ಗಾಜಾ ನಗರದ ಹೊರವಲಯದಲ್ಲಿ ಶನಿವಾರ ತಾನು ನಡೆಸಿದ್ದ ದಾಳಿಯಲ್ಲಿ ಸಾದ್‌ನನ್ನು ಹತ್ಯೆ ಮಾಡಲಾಗಿದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಸೂತ್ರಧಾರನೇ ಸಾದ್' ಎಂದು ಇಸ್ರೇಲ್ ಹೇಳಿದೆ.

