ಬದಿಯಡ್ಕ: ತ್ತಿಸ್ಥರ ಪಂಚಾಯತಿ ಚುನಾವಣೆಯ ಅಂಗವಾಗಿ ಬಿಜೆಪಿ ಬದಿಯಡ್ಕ ಪಂಚಾಯತಿ ಸಮಿತಿ ಸಿದ್ದ ಪಡಿಸಿದ ಮುಂದಿನ 5 ವರ್ಷಗಳ ಅಭಿವೃದ್ದಿ ಪ್ರಣಾಳಿಕೆಯ ಬಿಡುಗಡೆ ಕಾರ್ಯಕ್ರಮ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಬುಧವಾರ ಜರಗಿತು. ಪಕ್ಷದ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಅವರು ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಅಂತ್ಯದವರೆಗೂ ದೇಶಕ್ಕೋಸ್ಕರ ತನ್ನ ಸಂಸ್ಕಾರವನ್ನು ರೂಢಿಸಿಕೊಂಡು ಬಂದ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಸರ್ಕಾರದ ಸಂಪತ್ತಿನಿಂದ ತನ್ನ ಮನೆಗೂ ಕೆಲಸದವರನ್ನು ಇರಿಸಿಕೊಳ್ಳದೆ ಸರ್ಕಾರದ ಖಜಾನೆಯನ್ನು ತುಂಬಿಸುವ ಕಾರ್ಯವನ್ನು ಮಾಡಿದ್ದಾರೆ. ಆದರೆ ಸ್ವಾರ್ಥಕ್ಕೋಸ್ಕರ ದೇಶ ಹಾಗೂ ರಾಜಕೀಯ ಪಕ್ಷವನ್ನು ಉಪಯೋಗಿಸಿಕೊಂಡ ಕುಟುಂಬವು ದೇಶವನ್ನು ಲೂಟಿಗೈದಿದೆ. ದೇಶದ ಚರಿತ್ರೆ ಗೊತ್ತಿಲ್ಲದೆ, ರಾಜಕೀಯ ಅನುಭವವಿಲ್ಲದೆ ಪ್ರತಿಪಕ್ಷದ ನಾಯಕ ಎಂದು ರಾಹುಲ್ ಗಾಂಧಿ ಗುರುತಿಸಿಕೊಂಡಿದ್ದಾರೆ. ಆದರೆ ಸಾಮಾನ್ಯ ವ್ಯಕ್ತಿಯೂ ದೇಶದ ಪ್ರಧಾನಿಯಾಗಬಹುದು ಎಂಬುದನ್ನು ತೋರಿಸಿಕೊಟ್ಟಿರುವುದು ಭಾರತೀಯ ಜನತಾ ಪಕ್ಷವಾಗಿದೆ. ಪ್ರಪಂಚದಲ್ಲಿಯೇ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಭಾರತವಿಂದು ಏನು ಹೇಳುತ್ತದೆ ಎಂಬುದನ್ನು ಜಗತ್ತು ಕಾತರದಿಂದ ನೋಡುತ್ತಿದೆ. ಪ್ರಸ್ತುತ ನರೇಂದ್ರಮೋದಿಯವರ ಆಡಳಿತದಲ್ಲಿ ರಸ್ತೆ, ರೈಲ್ವೇ ಹಾಗೂ ಮೂಲಭೂತ ಸೌಕರ್ಯಗಳಿಗೆ ಒತ್ತನ್ನು ನೀಡಿ ದೇಶವು ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ. ಅವರು ದೇಶ ಹಾಗೂ ಪ್ರಪಂಚದ ಉನ್ನತಿಗಾಗಿ ಅವತಾರವೆತ್ತಿದ ಯುಗಪುರುಷ ಎಂದರು. ಎಡ ಬಲರಂಗಗಳ ಒಪ್ಪಂದದ ರಾಜಕೀಯವು ಕೇರಳ ರಾಜ್ಯವನ್ನು ಕೊಳ್ಳೆಹೊಡೆಯುತ್ತದೆ. ತ್ರಿಸ್ಥರ ಪಂಚಾಯಿತಿ ಚುನಾವಣೆಯಲ್ಲಿ ನಿರ್ಧಿಷ್ಟ ಗುರಿಯೊಂದಿಗೆ ಜನಸಾಮಾನ್ಯರನ್ನು ಭೇಟಿಯಾಗುತ್ತಾ ನಮ್ಮ ಪ್ರಣಾಳಿಕೆಯನ್ನು ನೀಡಿ ಬದಿಯಡ್ಕ ಗ್ರಾಮಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರವನ್ನು ಪಡೆಯಬೇಕು ಎಂಬ ಆಶಯದೊಂದಿಗೆ ಅಭ್ಯರ್ಥಿಗಳು ಕಾರ್ಯಕರ್ತರೊಂದಿಗೆ ಮುಂದುವರಿಯಬೇಕು ಎಂದರು.
ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ ಮಾತನಾಡಿ, ಪಕ್ಷದ ಪ್ರಣಾಳಿಕೆಯನ್ನು ಜನರಿಗೆ ತಲುಪಿಸಿ 25 ವರ್ಷಗಳ ಕಾಲ ಆಡಳಿತ ಮಾಡಿದ ಯುಡಿಎಫ್‍ನ ಅಧಿಕಾರವನ್ನು ಕೊನೆಗೊಳಿಸಬೇಕು. ಮೂಲಭೂತ ಸೌಕರ್ಯಗಳೇ ಇಲ್ಲದ ಬದಿಯಡ್ಕದ ಜನತೆಗೆ ಅಭಿವೃದ್ಧಿ ಏನೆಂಬುದನ್ನು ತೋರಿಸಿಕೊಡಬೇಕು ಕಾರ್ಯಕರ್ತರಿಗೆ ಕರೆಯಿತ್ತರು.
ಹಿರಿಯರಾದ ಬದಿಯಡ್ಕ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಕೃಷ್ಣ ಭಟ್ ವಾಶೆಮನೆ ಮಾತನಾಡಿದರು. ಬಿಜೆಪಿ ಚುನಾವಣಾ ಸಮಿತಿ ಅಧ್ಯಕ್ಷ ಜಯರಾಮ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಇತರ ಮುಖಂಡರುಗಳಾದ ಜಿಲ್ಲಾ ಪಂಚಾಯತಿ ಅಭ್ಯರ್ಥಿ ರಾಮಪ್ಪ ಮಂಜೇಶ್ವರ, ಒಬಿಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಮುರಳಿ, ಶಂಕರ ದರ್ಬೆತ್ತಡ್ಕ, ಅಶ್ವಿನಿ ಮೊಳೆಯಾರು, ಪಿ.ರಮೇಶ್, ಅವಿನಾಶ್ ವಿ.ರೈ ಉಪಸ್ಥಿತರಿದ್ದರು. ಕ್ಯಾಂಪೆÇ್ಕ ಉಪಾಧ್ಯಕ್ಷರಾಗಿ ಆಯ್ಕೆಯಾದ ಪದ್ಮರಾಜ ಪಟ್ಟಾಜೆ ಅವರನ್ನು ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಡಿ.ಕೆ.ನಾರಾಯಣನ್ ನಾಯರ್ ಸ್ವಾಗತಿಸಿ, ಮಹೇಶ್ ವಳಕುಂಜ ವಂದಿಸಿದರು.

.jpg)
