ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಧನುಸಂಕ್ರಮಣದ ಪ್ರಯುಕ್ತ ಏಕಾದಶ ರುದ್ರಾಭಿಷೇಕ, ಬಲಿವಾಡುಕೂಟ ಮತ್ತು ಜೀರ್ಣೋದ್ಧಾರ ಸಮಿತಿ ಹಾಗೂ ಶಿವಶಕ್ತಿ ಸಂಸ್ಥೆಯ ಶಿವಾರ್ಪಣಂ ನಿಕೂಪನ್ ಡ್ರಾ ಕಾರ್ಯಕ್ರಮ ಸೋಮವಾರ ಮಧ್ಯಾಹ್ನ ಶ್ರೀಕ್ಷೇತ್ರದ ಸಭಾ ಭವನದಲ್ಲಿ ಜರಗಿತು. ಉದ್ಯಮಿ ಕೊಡುಗೈದಾನಿ ಬಿ.ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಸುಬ್ಬರಾವ್ ಉಪ್ಪಂಗಳ ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಉದ್ಯಮಿ ರವೀಂದ್ರನಾಥ ಕಾಮತ್ ಬದಿಯಡ್ಕ, ಉದ್ಯಮಿ ಪ್ರತಿಭಾ ಭಟ್, ಕೊಡ್ಯಮೆ ಅರಮನೆಯ ಕೃಷ್ಣಯ್ಯ ಬಲ್ಲಾಳ್, ಸೇವಾಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ರೈ, ಆಡಳಿತ ಮಂಡಳಿ ಸದಸ್ಯ ಕೃಷ್ಣ ಬದಿಯಡ್ಕ, ಶಿವಶಕ್ತಿ ಸಂಘದ ಅಧ್ಯಕ್ಷ ಭಾಸ್ಕರ ಪಂಜಿತ್ತಡ್ಕ, ಕಾರ್ಯದರ್ಶಿ ಉದಯ ಪಟ್ಟಾಜೆ, ಕೋಶಾಧಿಕಾರಿ ಪುಟ್ಟನಾಯ್ಕ, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳಾದ ಗಣೇಶ್ ಪ್ರಸಾದ್ ಕಡಪ್ಪು, ಸತೀಶ್ ಕುಮಾರ್ ಪುದ್ಯೋಡು, ಶಿವಶಕ್ತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಉದಯಶಂಕರ ಭಟ್ ಪಟ್ಟಾಜೆ ವಂದಿಸಿದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆಯ ನಂತರ ಅದೃಷ್ಟಶಾಲಿಯನ್ನು ಆಯ್ಕೆಮಾಡಲಾಯಿತು.

.jpg)
