ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ನಿಧಿಗೆ ಮೊಗ್ರಾಲ್ ಸಾಂತ್ವನಂ ಚಾರಿಟಿ ಗ್ರೂಪ್ ವತಿಯಿಂದ ಒಂದು ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಲಾಯಿತು. ಸಾಂತ್ವನಂ ಟ್ರಸ್ಟ್ ಪ್ರತಿನಿಧಿ ಅನ್ವರ್ ಅಹ್ಮದ್ ಅವರಿಂದ ಶಾಸಕ ಎ.ಕೆ.ಎಂ. ಅಶ್ರಫ್ ಮೊತ್ತವನ್ನು ಸ್ವೀಕರಿಸಿದರು.
ಕಲೋತ್ಸವ ನಡೆಯಲಿರುವ ಮೊಗ್ರಾಲ್ಪುತ್ತುರು ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ. ಅಧ್ಯಕ್ಷ ಲತೀಫ್ ಕೊಪ್ಪಲಂ, ಪ್ರಾಂಶುಪಾಲ ಬಿನಿ ಪಿ., ಶಾಲಾ ಮುಖ್ಯ ಶಿಕ್ಷಕ ಜೆ.ಜಯರಾಮ್, ಜೆಡ್.ಎ.ಮೊಗ್ರಾಲ್, ರಿಯಾಜ್ ಕರೀಂ, ಸಯ್ಯದ್ ಹಾದಿ ತಂಙಳ್, ವಿ.ಪಿ. ಅಬ್ದುಲ್ ಖಾದರ್, ಟಿ.ಎಂ. ಶುಹೈಬ್, ಪಿ.ಎ. ಆಸಿಫ್, ಸಿದ್ದಿಕ್ ರೆಹಮಾನ್, ಎಂ.ಪಿ. ಅಬ್ದುಲ್ ಖಾದರ್, ಟಿ.ಕೆ. ಅನ್ವರ್, ಮಹಮ್ಮದ್ ಅಬ್ಕೋ ಮೊದಲಾದವರು ಉಪಸ್ಥಿತರಿದ್ದರು.


