ಮುಳ್ಳೇರಿಯ: ಸಿಪಿಐಎಂ ಆಡಳಿತದಲ್ಲಿದ್ದ ದೇಲಂಪಾಡಿ ಪಂಚಾಯತಿಯಲ್ಲಿ ಎಡರಂಗದ ಔದ್ಯೋಗಿಕ ಅಭ್ಯರ್ಥಿಗಳ ವಿರುದ್ಧ ಬಂಡುಕೋರರಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಬ್ಬರು ಭರ್ಜರಿ ಗೆಲುವು ಸಾಧಿಸಿದ್ದು, ಈ ಮೂಲಕ ಸಿಪಿಎಂನ ಅಧಿಕೃತ ಅಭ್ಯರ್ಥಿಗಳಿಗೆ ಹಾಗೂ ಪಕ್ಷಕ್ಕೆ ಮುಖಭಂಗವುಂಟುಮಾಡಿದ್ದಾರೆ.
ಒಂದನೇ ವಾರ್ಡು ಉಜಂಪಾಡಿಯಲ್ಲಿ ಸಿಪಿಎಂ ಬಂಡುಕೋರ ಅಭ್ಯರ್ಧಿ ಐತ್ತಪ್ಪ ನಾಯ್ಕ್ 275 ಮತಗಳ ಅಂತರದಲ್ಲಿ ಸಿಪಿಐಎಂನ ಅಧಿಕೃತ ಅಭ್ಯರ್ಥಿಗೆ ಸೋಲುಣಿಸಿದ್ದಾರೆ. ಎರಡನೇ ವಾರ್ಡು ದೇಲಂಪಾಡಿಯಲ್ಲಿ ಸಿಪಿಎಂ ಬಂಡುಕೋರ ಮುಸ್ತಪ ಹಾಜಿ ಅವರು 177 ಮತಗಳ ಅಂತರದಿಂದ ಅಧಿಕೃತ ಸಿಪಿಎಂ ಅಭ್ಯರ್ಥಿಯನ್ನು ಪರಾಭವಗೊಳಿಸಿದ್ದಾರೆ. ಮೂರನೇ ವಾರ್ಡು ಬೆಳ್ಳಿಪ್ಪಾಡಿಯಲ್ಲಿ ಬಿಜೆಪಿಯ ಧನಂಜಯ 201 ಮತಗಳಿಂದ ಗೆಲುವು ಸಾಧಿಸಿದ್ದಾರೆ.

