ಕಾಸರಗೋಡು: ಪಾಣತ್ತೂರಿನಲ್ಲಿ ಕಾಡುಕೋಣದ ದಾಳಿಯಿಂದ ರಬ್ಬರ್ ಟ್ಯಾಪಿಂಗ್ ಕಾರ್ಮಿಕ, ಪಾಣತ್ತುರು ಕಮ್ಮಾಡಿ ನಿವಾಸಿ ಕೆ. ರಾಮನ್(46)ಗಂಭೀರ ಗಾಯಗೊಂಡಿದ್ದು, ಇವರನ್ನು ಸುಳ್ಯದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಮ್ಮಾಡಿಯಲ್ಲಿ ಪಾಣತ್ತೂರು ಎಸ್ಟೇಟ್‍ನಲ್ಲಿ ಮಂಗಳವಾರ ಬೆಳಗ್ಗೆ ರಬ್ಬರ್ ಟ್ಯಾಪಿಂಗ್ ನಡೆಸುವ ಮಧ್ಯೆ ಕಾಡುಕೋಣ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತ್ತು.

