HEALTH TIPS

ಗಾಜಾಕ್ಕೆ ಸೇನೆ: ಪಾಕ್‌ಗೆ ಇಕ್ಕಟ್ಟು ತಂದ ಅಮೆರಿಕ ಅಧ್ಯಕ್ಷ ಟ್ರಂಪ್ ಯೋಜನೆ

ಇಸ್ಲಾಮಾಬಾದ್: ಭಾರತ ವಿರುದ್ಧದ ಯುದ್ಧ ಸೇರಿದಂತೆ ಪ್ರತಿ ವಿಷಯಕ್ಕೂ ಅಮೆರಿಕದ ಮೊರೆ ಹೋಗುವ ಪಾಕಿಸ್ತಾನಕ್ಕೆ ಈಗ ಒಂದು ದೊಡ್ಡ ಪರೀಕ್ಷೆ ಎದುರಾಗಿದೆ. ಗಾಜಾದ ಸ್ಥಿರೀಕರಣ ಪಡೆಗೆ ಸೇನೆ ಕಳುಹಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದು, ಇದರಿಂದಾಗಿ ಪಾಕ್ ಸೇನಾ ಮುಖ್ಯಸ್ಥ ಆಸಿಫ್ ಮುನೀರ್ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ವರದಿ ತಿಳಿಸಿದೆ.

ಹಾಗೇನಾದರೂ ಒಮ್ಮೆ ಸೇನೆ ಕಳುಹಿಸಿದರೆ ಪಾಕಿಸ್ತಾನದಲ್ಲಿ ದೇಶೀಯ ಭದ್ರತೆಗೆ ಕೊರತೆ ಉಂಟಾಗಲಿದೆ. ಒಂದೊಮ್ಮೆ ಕಳುಹಿಸದೇ ಇದ್ದಲ್ಲಿ ಟ್ರಂಪ್ ಕೋಪಕ್ಕೆ ತುತ್ತಾಗಿ ಅಮೆರಿಕದಿಂದ ಬರುತ್ತಿರುವ ಆರ್ಥಿಕ ನೆರವಿಗೆ ಕೊಕ್ಕೆ ಬೀಳುವ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮುನೀರ್ ಅಮೆರಿಕಕ್ಕೆ ದೌಡಾಯಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಟ್ರಂಪ್‌ ಅವರ 20 ಅಂಶಗಳ ಗಾಜಾ ಯೋಜನೆಯಡಿ, ಎರಡು ವರ್ಷಗಳ ಕಾಲ ಇಸ್ರೇಲಿ ಮಿಲಿಟರಿ ಬಾಂಬ್ ದಾಳಿಯಿಂದ ನಾಶವಾದ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿ ಪುನರ್‌ ನಿರ್ಮಾಣ ಮತ್ತು ಆರ್ಥಿಕ ಚೇತರಿಕೆಗಾಗಿ ಪರಿವರ್ತನೆಯ ಮೇಲ್ವಿಚಾರಣೆ ಮಾಡಲು ಮುಸ್ಲಿಂ ರಾಷ್ಟ್ರಗಳಿಂದ ಸೇನೆಯನ್ನು ಕಳುಹಿಸುವಂತೆ ಕೇಳಲಾಗುತ್ತಿದೆ.

ಗಾಜಾದ ಇಸ್ಲಾಮಿಸ್ಟ್ ಉಗ್ರಗಾಮಿ ಗುಂಪು ಹಮಾಸ್ ಅನ್ನು ನಿಶಸ್ತ್ರೀಕರಣಗೊಳಿಸುವ ಕಾರ್ಯಾಚರಣೆಯ ಬಗ್ಗೆ ಅನೇಕ ದೇಶಗಳು ಎಚ್ಚರಿಕೆ ವಹಿಸುತ್ತಿವೆ. ಅಲ್ಲದೆ, ಹಮಾಸ್ ತಿರುಗಿಬೀಳುವ ಆತಂಕದಲ್ಲಿದ್ದಾರೆ.

ಭಾರಿ ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಪಾಕಿಸ್ತಾನ ಅಮೆರಿಕದ ಕೃಪೆಯಲ್ಲಿದೆ. ಕಳೆದ ಜೂನ್ ತಿಂಗಳಲ್ಲಿ ಮುನೀರ್‌ಗೆ ಶ್ವೇತಭವನದಲ್ಲಿ ಭೋಜನಕೂಟ ಏರ್ಪಡಿಸಿದ್ದ ಟ್ರಂಪ್, ಪಾಕಿಸ್ತಾನದಲ್ಲ್ಲಿ ಗಣಿಗಾರಿಕೆ ಕುರಿತಾದ ಡೀಲ್ ಮಾಡಿದ್ದರು.

'ಗಾಜಾ ಕಾರ್ಯಾಚರಣೆಗೆ ಪಾಕಿಸ್ತಾನ ಸೇನೆ ಕಳುಹಿಸಲು ನಿರಾಕರಿಸಿದರೆ, ಅದು ಟ್ರಂಪ್ ಅವರನ್ನು ನಿರಾಶೆಗೊಳಿಸಬಹುದು. ಅದು ಪಾಕಿಸ್ತಾನಕ್ಕೆ ಸಮಸ್ಯೆಯಾಗಬಹುದು. ಏಕೆಂದರೆ ಅಸಿಮ್ ಮುನೀರ್ ಮಾತ್ರವಲ್ಲ, ಒಟ್ಟಾರೆಯಾಗಿ ಪಾಕ್ ನಾಗರಿಕ ಮತ್ತು ಮಿಲಿಟರಿ ನಾಯಕತ್ವವು ಪಾಕಿಸ್ತಾನದಲ್ಲಿ ಹೂಡಿಕೆ ಮಾಡಲು ಮತ್ತು ಭದ್ರತಾ ನೆರವಿಗಾಗಿ ಅಮೆರಿಕದ ಕಡೆ ನೋಡುತ್ತಿದ್ದಾರೆ. ಸದ್ಯ, ಈ ಹೂಡಿಕೆ ಮತ್ತು ಭದ್ರತಾ ನೆರವನ್ನು ಅಮೆರಿಕ ಕೆಲಕಾಲ ತಡೆ ಹಿಡಿದಿದೆ'ಎಂದು ವಾಷಿಂಗ್ಟನ್ ಮೂಲದ ಅಟ್ಲಾಂಟಿಕ್ ಕೌನ್ಸಿಲ್‌ನ ದಕ್ಷಿಣ ಏಷ್ಯಾದ ಹಿರಿಯ ಅಧಿಕಾರಿ ಮೈಕೆಲ್ ಕುಗೆಲ್ಮನ್ ಹೇಳಿದ್ದಾರೆ.

ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿಶ್ವದ ಏಕೈಕ ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನವು ಭಾರತದ ಜೊತೆಗಿನ ಯುದ್ಧದಲ್ಲಿ ಬಹಳಷ್ಟು ಹಾನಿಗೊಳಗಾಗಿದೆ. ಅಲ್ಲದೆ, ಬಲೂಚಿಸ್ತಾನದ ದಂಗೆ, ಅಫ್ಗಾನಿಸ್ತಾನದಿಂದ ಉಗ್ರರ ದಾಳಿಗಳನ್ನು ಎದುರಿಸುತ್ತಿದೆ.

ಶಾಂತಿಪಾಲನೆಗಾಗಿ ಸೇನೆ ಕಳುಹಿಸುವುದನ್ನು ಪರಿಗಣಿಸಲಾಗುವುದು ಎಂದು ಕಳೆದ ತಿಂಗಳು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries