ಕುಂಬಳೆ: ಅಂಗಡಿಮೊಗರು ಗ್ರಾಮದ ಇತಿಹಾಸ ಪ್ರಸಿದ್ಧ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ವರ್ಷಂಪ್ರತಿ ಜರಗುವ ಧನುಪೂಜಾ ಮಹೋತ್ಸವ ಮಂಗಳವಾರ ಬೆಳಗ್ಗೆ ಆರಂಭಗೊಂಡಿತು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯ ಜರಗಿತು. ಕ್ಷೇತ್ರಕ್ಕೆ ವಿವಿಧೆಡೆಗಳಿಂದ ಭಕ್ತರು ಪ್ರಾತಃಕಾಲದ ಬ್ರಾಹ್ಮಿ ಮುಹೂರ್ತದಲ್ಲಿ ಆಗಮಿಸಿ ವಿವಿಧ ಸೇವೆಗೈದು ಕೃತಾರ್ಥರಾದರು. ಕ್ಷೇತ್ರಕ್ಕೆ ಬಂದ ದೂರದೂರಿನ ಭಕ್ತರನ್ನು ಆದರಾತಿಥ್ಯದಿಂದ ಕ್ಷೇತ್ರ ಸಮಿತಿಯು ಸ್ವಾಗತಿಸುತ್ತಿರುವುದು ಇಲ್ಲಿನ ಧನು ಪೂಜೆಯ ವಿಶೇಷತೆಯಾಗಿ ವರ್ಷಗಳಿಂದಲೂ ಪ್ರಸಿದ್ಧಿಯನ್ನು ಪಡೆದಿತ್ತು.
ಬೆಳಂಬೆಳಗ್ಗೆಯೇ ನೂರಾರು ಭಕ್ತರು ಭೇಟಿ ನೀಡುವ ಕ್ಷೇತ್ರದಲ್ಲಿ ಧನು ಪೂಜೆಯು ಮಕರ ಸಂಕ್ರಮಣದ ತನಕ ಉತ್ಸವದ ಪ್ರತೀತಿಯಲ್ಲಿ ನಡೆಯುತ್ತಿದೆ.ಅಲಂಕಾರ ಸೇವೆ, ಧನುಪೂಜಾ ಸೇವೆ ಇಲ್ಲಿನ ವಿಶೇಷ ಸೇವೆಗಳಾಗಿದೆ. ಪ್ರಾತಃಕಾಲ ಶ್ರೀಮಹಾಲಿಂಗೇಶ್ವರ ಭಜನಾ ಸಂಘ ದೇಲಂಪಾಡಿ ಅವರಿಂದ ಭಜನಾ ಸಂಕೀರ್ತನೆ ಜರಗಿತು.
ಧನುಪೂಜಾ ಮಹೋತ್ಸವದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ವಿಶೇಷ ದಿನಗಳಲ್ಲಿ ಹರಿಕಥೆ, ವೇದ ಪಾರಾಯಣ, ಭಕ್ತಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

.jpg)
.jpg)
