ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬ್ಡಾಜೆಯಲ್ಲಿ ಜಿಲ್ಲಾ ಪಂಚಾಯಿತಿ ಬದಿಯಡ್ಕ ಡಿವಿಶನ್ನಿಂದ ಸ್ಪರ್ಧಿಸುತ್ತಿರುವ ಎಡರಂಗ ಅಭ್ಯರ್ಥಿ ಪ್ರಕಾಶ್ ಕುಂಬ್ಡಾಜೆ ಅವರ ಮನೆ ಸನಿಹ ಕಚ್ಚಾಬಾಂಬು ಸ್ಪೋಟ ಸಂಭವಿಸಿರುವ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಪಿಐ ಜಿಲ್ಲಾ ಕೌನ್ಸಿಲ್ ಆಗ್ರಹಿಸಿದೆ.
ಒಂದು ಕಚ್ಚಾಬಾಂಬು ಸ್ಪೋಟಿಸಿದ್ದರೆ, ಇತರ ಮೂರು ಸಜೀವ ಬಾಂಬುಗಳು ಪತ್ತೆಯಾಗಿದ್ದು, ಘಟನೆಯ ನಿಗೂಢತೆ ಬಯಲಿಗೆಳೆಯಬೇಕು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ ಬಾಬು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಕಾಶ್ ಅವರ ತೋಟದಲ್ಲಿ ಕಚ್ಚಾಬಾಂಬು ಸ್ಪೋಟಗೊಂಡ ಪರಿಣಾಮ ಸಾಕು ನಾಯಿ ಸಾವಿಗೀಡಾಗಿದ್ದು, ಆಸುಪಾಸಿನಿಂದ ಸ್ಪೋಟಗೊಳ್ಳದೆ ಉಳಿದಿದ್ದ ಮೂರು ಸಜೀವ ಕಚ್ಚಾಬಾಂಬುಗಳನ್ನು ಪತ್ತೆಹಚ್ಚಲಾಗಿತ್ತು.

