HEALTH TIPS

'ಪವಿತ್ರ ನಗರ'ಗಳಲ್ಲಿ ಮದ್ಯ, ಮಾಂಸ ನಿಷೇಧಿಸಿದ ಪಂಜಾಬ್ ಸರ್ಕಾರ

 ಚಂಡೀಗಢ: ಅಮೃತಸರದ 'ನಾಲ್ಕು ಗೋಡೆಗಳ ನಗರ' (ವಾಲ್ಡ್‌ ಸಿಟಿ), ತಲವಂಡಿ ಸಾಬೊ ಮತ್ತು ಶ್ರೀ ಆನಂದಪುರ ಸಾಹೀಬ್‌ ನಗರಗಳಲ್ಲಿ ಮದ್ಯ, ಮಾಂಸ ಮತ್ತು ಇತರ ಅಮಲು ಪದಾರ್ಥಗಳ ಮಾರಾಟವನ್ನು ನಿಷೇಧಿಸಿ ಸರ್ಕಾರ ಆದೇಶಿಸಿದೆ. ಈ ನಗರಗಳಿಗೆ ರಾಜ್ಯ ಸರ್ಕಾರವು 'ಪವಿತ್ರ ನಗರ' ಸ್ಥಾನಮಾನ ನೀಡಿದೆ.

ಮುಖ್ಯಮಂತ್ರಿ ಭಗವಂತ ಸಿಂಗ್‌ ಮಾನ್‌ ಅವರು, 'ಪವಿತ್ರ ನಗರ ಸ್ಥಾನಮಾನ ನೀಡಿರುವುದು ಸಿಖ್ ಸಮುದಾಯದಲ್ಲಿ ಸಂತಸ ತಂದಿದೆ. ಈ ನಗರಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ‌, ನಮ್ಮ ಪರಂಪರೆಯ ಸಂಕೇತ' ಎಂದು ಅವರು ಭಾನುವಾರ ವಿಡಿಯೊ ಸಂದೇಶದ ಮೂಲಕ ತಿಳಿಸಿದರು.

ಕಳೆದ ತಿಂಗಳು ನಡೆದ ಪಂಜಾಬ್‌ ವಿಧಾನಸಭೆಯ ವಿಶೇಷ ಅಧಿವೇಶನದ ಸಂದರ್ಭದಲ್ಲಿ 'ಪವಿತ್ರ ನಗರ' ಈ ಕುರಿತ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಲಾಗಿತ್ತು. ಬಳಿಕ ಡಿಸೆಂಬರ್‌ 15ರಂದು ರಾಜ್ಯ ಸರ್ಕಾರ ಈ ಸಂಬಂಧ ಸುತ್ತೋಲೆ ಹೊರಡಿಸಿತ್ತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries