ಮುಳ್ಳೇರಿಯ: ಬಡಗು ಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ವಾರ್ಷಿಕ ಪಾಟು, ಶ್ರೀ ಭೂತಬಲಿ ಉತ್ಸವ ಹಾಗೂ ಶ್ರೀ ಧೂಮಾವತಿ ದೈವದ ಕೋಲವು ಡಿ.15 ರಿಂದ 19ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತರ ಸನ್ನಿಧಿಯಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ಇದರಂಗವಾಗಿ ಇಂದು(ಡಿ.15) ಬೆಳಗ್ಗೆ ಗಣಪತಿ ಹವನ, ಪ್ರಾರ್ಥನೆ, ಮಹಾಪೂಜೆ, ಪಾಟು ಉತ್ಸವ, ಪ್ರಸಾದ ವಿತರಣೆ, ಮಹಾಪೂಜೆ, ಪಾಟು ಉತ್ಸವ, ಪ್ರಸಾದ ವಿತರಣೆ, ಭೋಜನ ಪ್ರಸಾದ, ಸಂಜೆ ದೀಪಾರಾಧನೆ, ಕಾಟ್ನೂಜಿ ಶ್ರೀ ಶಾಸ್ತಾರ ಮೂಲಸ್ಥಾನದಿಂದ ವಿಶೇಷ ಉಲ್ಪೆ ಹೊರಟು ಶ್ರೀ ಧರ್ಮಶಾಸ್ತ ಸೇವಾ ಸಂಘ, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರೊಡಗೂಡಿ ಶ್ರೀ ಶಾಸ್ತಾ ಕಲಾ ಸಮಿತಿ ಉಬ್ರಂಗಳ ಇವರ ಸಿಂಗಾರಿಮೇಳದೊಂದಿಗೆ ದೇವಸ್ಥಾನಕ್ಕೆ ಬುರುವುದ. ಬಳಿಕ ಭಜನೆ, ಮಹಾಪೂಜೆ, ಪಾಟು ಉತ್ಸವ, ಪ್ರಸಾದ ವಿತರಣೆ ನಡೆಯುವುದು.
ಡಿ.16ರಂದು ಬೆಳಗ್ಗೆ ಮಹಾಪೂಜೆ, ಪಾಟು ಉತ್ಸವ, ಪ್ರಸಾದ ವಿತರಣೆ, ರಾತ್ರಿ ಮಹಾಪೂಜೆ, ಪಾಟು ಉತ್ಸವ, ಪ್ರಸಾದ ವಿತರಣೆ ನಡೆಯುವುದು.
ಡಿ.17ರಂದು ಬೆಳಗ್ಗೆ ಮಹಾಪೂಜೆ, ಪಾಟು ಉತ್ಸವ, ಪ್ರಸಾದ ವಿತರಣೆ, ರಾತ್ರಿ ಮಹಾಪೂಜೆ, ಪಾಟು ಉತ್ಸವ, ಪ್ರಸಾದ ವಿತರಣೆ ನಡೆಯುವುದು.
ಡಿ.18ರಂದು ಬೆಳಗ್ಗೆ ಮಹಾಪೂಜೆ, ಕಳೋತ್ಲರಿ ಪೂಜೆ, ಪ್ರಸಾದ ವಿತರಣೆ, ಶ್ರೀ ಶಾಸ್ತಾರ ದೇವರ ಪಾಟು-ಮಂಗಳೋತ್ಸವ, ನವಕಾಭಿಷೇಕ, ತುಲಾಭಾರ ಸೇವೆ, ಬಲಿವಾಟು ಕೂಟ, ಸಂಜೆ ತಾಯಂಬಕ, ಸ್ಯಾಕ್ಸೋ-?Çೀನ್ ವಾದನ, ರಾತ್ರಿ ಬೆಡಿ ಉತ್ಸವ ನಡೆಯಲಿದೆ.
ಡಿ.19ರಂದು ನಡೆ ತೆರೆಯುವುದು, ಶ್ರೀ ಭೂತಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಮಂತ್ರಾಕ್ಷತೆ, ಶ್ರೀ ಧೂಮಾವತಿ ದೈವದ ಭಂಡಾರ ಶ್ರೀ ಕ್ಷೇತ್ರ ಪರಿಸರಕ್ಕೆ ಆಗಮನ, ಮಧ್ಯಾಹ್ನ ಮಹಾಪೂಜೆ, ಶ್ರೀ ಧೂಮಾವತಿ ದೈವ ಹಾಗೂ ಶ್ರೀ ಗುಳಿಗ ದೈವದ ಕೋಲ ಪ್ರಾರಂಭ ಬಳಿಕ ಅರಸಿನ ಪ್ರಸಾದ, ಶ್ರೀ ದೈವದ ಭಂಡಾರ ದೈವಸ್ಥಾನಕ್ಕೆ ನಿರ್ಗಮನದೊಂದಿಗೆ ಸಮಾಪ್ತಿಗೊಳ್ಳುವುದು.

