HEALTH TIPS

ಕೆಂಪುಕೋಟೆ ಸಮೀಪ ಕಾರು ಸ್ಫೋಟ ಪ್ರಕರಣ: ರಷೀದ್ ಅಲಿ NIA ಕಸ್ಟಡಿ 7 ದಿನ ವಿಸ್ತರಣೆ

ನವದೆಹಲಿ: ಕೆಂಪುಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟದ ಆರೋಪಿಗಳಲ್ಲಿ ಒಬ್ಬನಾದ ರಷೀದ್‌ ಅಲಿಯನ್ನು ದೆಹಲಿಯ ಪಟಿಯಾಲ ನ್ಯಾಯಾಲಯದ ಮುಂದೆ ಮಂಗಳವಾರ ಹಾಜರುಪಡಿಸಲಾಯಿತು.

ನವೆಂಬರ್‌ 26ರಂದು ಅಲಿಯನ್ನು ನ್ಯಾಯಾಲಯವು ಒಂದು ವಾರ ಎನ್‌ಐಎ ವಶಕ್ಕೆ ಒಪ್ಪಿಸಿತ್ತು. ಮಂಗಳವಾರಕ್ಕೆ ಈ ಅವಧಿ ಮುಕ್ತಾಯಗೊಂಡಿತ್ತು.

ಹೆಚ್ಚಿನ ವಿಚಾರಣೆಗೆ ಮತ್ತೆ ವಶಕ್ಕೆ ನೀಡುವಂತೆ ಅಧಿಕಾರಿಗಳು ಮಾಡಿದ ಮನವಿಯನ್ನು ಪರಿಗಣಿಸಿದ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಅಂಜು ಬಜಾಜ್‌ ಚಂದ್ನಾ, ಮತ್ತೆ ಒಂದು ವಾರ ಅವಧಿ ವಿಸ್ತರಿಸಿದರು.

ಕೆಂಪುಕೋಟೆ ಸಮೀಪ ಸ್ಫೋಟಗೊಂಡ ಕಾರು ರಷೀದ್‌ ಅಲಿಯ ಹೆಸರಿನಲ್ಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಎನ್‌ಐಎ 7 ಮಂದಿಯನ್ನು ಬಂಧಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries