ಕೀವ್: 'ಯುದ್ಧವನ್ನು ಅಂತ್ಯಗೊಳಿಸಲು ಮಧ್ಯಸ್ಥಿಕೆ ವಹಿಸಿರುವ ಅಮೆರಿಕಕ್ಕೆ ನಮ್ಮ ಶಾಂತಿ ಪ್ರಸ್ತಾವವನ್ನು ನೀಡಲು ಸಿದ್ಧತೆ ನಡೆಸಿದ್ದೇವೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದರು.
ಅಮೆರಿಕವು ರಷ್ಯಾದ ಪರವಾಗಿ ಪ್ರಸ್ತಾವ ರೂಪಿಸಿದೆ ಎನ್ನುವುದು ಉಕ್ರೇನ್ ಆರೋಪ.
ಇದಕ್ಕಾಗಿಯೇ ಯುದ್ಧದಲ್ಲಿ ಉಕ್ರೇನ್ ಅನ್ನು ಬೆಂಬಲಿಸುವ ಸುಮಾರು 30 ದೇಶಗಳ ನಾಯಕರು ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಲು ಝೆಲೆನ್‌ಸ್ಕಿ ಅವರು ತೆರಳಿದ್ದಾರೆ. ಇದರ ಮುನ್ನಾ ದಿನ ಅವರು ಈ ಹೇಳಿಕೆ ನೀಡಿದ್ದಾರೆ.
ಯುದ್ಧ ಅಂತ್ಯಗೊಳಿಸಲು ಅಮೆರಿಕವು ಒತ್ತಡ ಹೇರುತ್ತಿರುವ ಬೆನ್ನಲ್ಲೇ ಐರೋಪ್ಯ ದೇಶಗಳ ಹಲವು ನಾಯಕರು ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. 'ಮಾತುಕತೆಯು ನಿರ್ಣಾಯಕ ಹಂತದಲ್ಲಿದೆ' ಎಂದು ನಾಯಕರು ಹೇಳಿಕೆ ನೀಡಿದ್ದಾರೆ.

