HEALTH TIPS

Video Viral-ದೇಶ ಮೊದಲು, ನಂತರ ಹಬ್ಬ: ಮುಂಬೈಯ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೊಳಗಿದ 'ಜನ ಗಣ ಮನ'

 ಮುಂಬೈನ ಸೇಂಟ್ ಥಾಮಸ್ ಕ್ಯಾಥೆಡ್ರಲ್‌ನಲ್ಲಿ ಕ್ರಿಸ್‌ಮಸ್ ಕೋರಲ್ ಗಾಯನ ಪ್ರಾರಂಭವಾಗುತ್ತಿದ್ದಂತೆ ಭಾರತದ ರಾಷ್ಟ್ರಗೀತೆ ಮೊದಲು ಮೊಳಗಿತು. ಮೊದಲು ದೇಶ ಎಂಬ ತತ್ವದಡಿಯಲ್ಲಿ ಜನಗಣ ಮನ ಗೀತೆಯನ್ನು ಹಾಕಲಾಯಿತು. 


ಚರ್ಚ್ ನಲ್ಲಿ ಗಾಯಕವೃಂದವು ಭಾರತೀಯ ರಾಷ್ಟ್ರಗೀತೆಯ ನುಡಿಸುವಿಕೆಯೊಂದಿಗೆ ಕ್ರಿಸ್‌ಮಸ್ ಕರೋಲ್ ನ್ನು ಆರಂಭಿಸಿದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಗಮನ ಸೆಳೆಯುತ್ತಿದೆ.

ಐತಿಹಾಸಿಕ ಸೇಂಟ್ ಥಾಮಸ್ ಕ್ಯಾಥೆಡ್ರಲ್‌ನಲ್ಲಿ ಈ ಪ್ರದರ್ಶನ ನಡೆಯಿತು. ಅಲ್ಲಿ ವೈಲ್ಡ್ ವಾಯ್ಸಸ್ ಕಾಯಿರ್ ಇಂಡಿಯಾ ಕ್ರಿಸ್‌ಮಸ್ ಕೋರಲ್ ಸಂಜೆಯನ್ನು "ಜನ ಗಣ ಮನ" ದ ಭಾವಪೂರ್ಣ ಮತ್ತು ಶಿಷ್ಟಾಚಾರ-ಅನುಸರಣೆಯ ಪ್ರದರ್ಶನದೊಂದಿಗೆ ಪ್ರಾರಂಭಿಸಿ ನಂತರ ಸಾಂಪ್ರದಾಯಿಕ ಕರೋಲ್ ಹಾಡಿದರು.

ಛಾಯಾಗ್ರಾಹಕ ಮಾಲ್ಕಮ್ ಸ್ಟೀಫನ್ಸ್ ಹಂಚಿಕೊಂಡ ಈ ವಿಡಿಯೋ 2 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ದೇಶಭಕ್ತಿ ಮತ್ತು ಹಬ್ಬದ ಮನೋಭಾವದ ಈ ಹೃದಯಸ್ಪರ್ಶಿ ಕ್ಷಣವನ್ನು ನೆಟ್ಟಿಗರು ಕೊಂಡಾಡಿದ್ದಾರೆ.

ಸೈಂಟ್ ಥಾಮಸ್ ಕ್ಯಾಥಡ್ರಲ್ ಚರ್ಚ್ 300ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದು. ಇದು ಮುಂಬೈ ಮಹಾನಗರದ ಅತಿ ಹಳೆಯ ಚರ್ಚ್. ಬ್ರಿಟಿಷರ ವಸಾಹತುಶಾಹಿ ಜೀವನದಲ್ಲಿ ನೆಲೆಕಂಡ ಮುಂಬೈ ನಗರದ ಮೊದಲ ಆಂಗ್ಲನ್ನರ ಚರ್ಚ್. 1718ರಲ್ಲಿ ಇದನ್ನು ನಿರ್ಮಿಸಲಾಗಿದ್ದು ದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವಕ್ಕೆ ಕುರುಹಾಗಿದೆ. ಈ ಚರ್ಚ್ ನಲ್ಲಿ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries