ಏನಿದು ಘಟನೆ?
ಪ್ರತಿವರ್ಷ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೈ ಯಾತ್ರೆ ಕೈಗೊಳ್ಳುತ್ತಾರೆ. ಲಕ್ಷಾಂತರ ಭಕ್ತರು ಕೇರಳದ ಶಬರಿಮಲೈಗೆ ತೆರಳಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದು ತಮ್ಮ ವ್ರತವನ್ನು ಪೂರ್ಣಗೊಳಿಸುತ್ತಾರೆ. ರಾಜ್ಯದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕರ್ನಾಟಕದಿಂದ ವಾಹನ ಮಾಡಿಕೊಂಡು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಆದ್ರೆ ಕೇರಳದಲ್ಲಿ ಕರ್ನಾಟಕ ನೋಂದಣಿ ವಾಹನಗಳಿಗೆ ನಿರ್ಬಂಧ ಹೇರಿರುವ ಆರೋಪ ಕೇಳಿಬಂದಿದೆ. ಇದರಿಂದ ಕೆರಳಿದ ಅಯ್ಯಪ್ಪಸ್ವಾಮಿ ಭಕ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳ ಹಾಗೂ ಇತರೆ ವಾಹನಗಳಿಗೆ ಮಾತ್ರ ಪ್ರವೇಶ
ಮಾಲಾದಾರಿಗಳಿಗೆ ಎರುಮಲೈಯಿಂದ ಮುಂದೆ ಹೋಗಲು ಬಿಡುತ್ತಿಲ್ಲ ಎಂದು ಅಯ್ಯಪ್ಪಸ್ವಾಮಿ ಭಕ್ತರು ಆರೋಪಿಸಿದ್ದಾರೆ. ಕೇರಳದ ಪೊಲೀಸರು ಕೇರಳ ಹಾಗೂ ಇತರೆ ವಾಹನಗಳಿಗೆ ಮಾತ್ರ ಒಳಗೆ ಬಿಡುತ್ತಿದ್ದಾರೆ. ಕರ್ನಾಟಕದ ನೋಂದಣಿ ಇರುವ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿದ್ದಾರೆ ಎಂದು ಆರೋಪ ಕೇಳಿಬಂದಿದ್ದು, ಶಿವಮೊಗ್ಗದ ಭದ್ರಾವತಿ ಸೇರಿದಂತೆ ಕರ್ನಾಟಕದ ಹಲವು ಅಯ್ಯಪ್ಪ ಮಾಲಾಧಾರಿಗಳು ಪ್ರತಿಭಟನೆ ನಡೆಸಿದ್ದಾರೆ.
ರಸ್ತೆಯಲ್ಲೇ ಕುಳಿತು ಮಾಲಾದಾರಿಗಳಿಂದ ಭಜನೆ
ಕೇರಳ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳು ಏರುಮಲೈನಲ್ಲಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ರಸ್ತೆಯನ್ನ ತಡೆದು ರಸ್ತೆಮಧ್ಯೆದಲ್ಲೇ ಕುಳಿತು ಮಾಲಾಧಾರಿಗಳು ಭಜನೆ ಮಾಡಿದ್ದಾರೆ.