ಈ ಪಟ್ಟಿಯಲ್ಲಿ ಕರ್ನಾಟಕದ ಎರಡು ಸಂಸ್ಥೆಗಳೂ ಸೇರಿರುವುದು ಗಮನಾರ್ಹ.
ಯುಜಿಸಿ ತಿಳಿಸಿರುವಂತೆ, ಈ ಸಂಸ್ಥೆಗಳು ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆಯದೆ 'ವಿಶ್ವವಿದ್ಯಾಲಯ' ಎಂಬ ಹೆಸರಿನಲ್ಲಿ ಪದವಿಗಳನ್ನು ನೀಡುತ್ತಿವೆ. ಯುಜಿಸಿ ಕಾಯ್ದೆಯ ಸೆಕ್ಷನ್ 2(ಎಫ್) ಮತ್ತು 3ರ ಪ್ರಕಾರ, ಮಾನ್ಯತೆ ಇಲ್ಲದೆ ಪದವಿ ನೀಡಲು ಯಾವುದೇ ಸಂಸ್ಥೆಗೆ ಅಧಿಕಾರವಿಲ್ಲ. ಹೀಗಾಗಿ ಇವುಗಳಿಂದ ನೀಡಲ್ಪಡುವ ಪದವಿಗಳು ಉದ್ಯೋಗ ಮತ್ತು ಉನ್ನತ ಶಿಕ್ಷಣ ಪ್ರವೇಶಕ್ಕೆ ಅಮಾನ್ಯವಾಗಿವೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರವೇಶಕ್ಕೂ ಮುನ್ನ ಸಂಬಂಧಿತ ಸಂಸ್ಥೆಯ ಮಾನ್ಯತೆ ಸ್ಥಿತಿಯನ್ನು ಯುಜಿಸಿ ಅಧಿಕೃತ ಮೂಲಗಳಿಂದ ಪರಿಶೀಲಿಸಬೇಕು ಎಂದು ಮನವಿ ಮಾಡಲಾಗಿದೆ.
►ರಾಜ್ಯವಾರು ವಿವರ
ಪಟ್ಟಿಯ ಪ್ರಕಾರ, ದಿಲ್ಲಿಯಲ್ಲಿ ಅತಿ ಹೆಚ್ಚು 12 ನಕಲಿ ವಿಶ್ವವಿದ್ಯಾಲಯಗಳಿವೆ. ನಂತರ ಉತ್ತರ ಪ್ರದೇಶದಲ್ಲಿ 4 ಸಂಸ್ಥೆಗಳು ಗುರುತಿಸಲ್ಪಟ್ಟಿವೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪುದುಚೇರಿ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ತಲಾ 2ರಷ್ಟು ಸಂಸ್ಥೆಗಳಿವೆ. ಅರುಣಾಚಲ ಪ್ರದೇಶ, ಹರಿಯಾಣ, ಜಾರ್ಖಂಡ್ ಮತ್ತು ರಾಜಸ್ಥಾನಗಳಲ್ಲಿ ತಲಾ ಒಂದರಂತೆ ನಕಲಿ ವಿವಿಗಳು ಪತ್ತೆಯಾಗಿವೆ.
ರಾಜ್ಯವಾರು ನಕಲಿ ವಿಶ್ವವಿದ್ಯಾಲಯಗಳ ಸಂಖ್ಯೆ:
* ದಿಲ್ಲಿ - 12
* ಉತ್ತರ ಪ್ರದೇಶ - 4
* ಆಂಧ್ರಪ್ರದೇಶ - 2
* ಕರ್ನಾಟಕ - 2
* ಕೇರಳ - 2
* ಮಹಾರಾಷ್ಟ್ರ - 2
* ಪುದುಚೇರಿ - 2
* ಪಶ್ಚಿಮ ಬಂಗಾಳ - 2
* ಅರುಣಾಚಲ ಪ್ರದೇಶ - 1
* ಹರಿಯಾಣ - 1
* ಜಾರ್ಖಂಡ್ - 1
* ರಾಜಸ್ಥಾನ - 1
►ಕರ್ನಾಟಕದಲ್ಲಿ ಗುರುತಿಸಲ್ಪಟ್ಟ ಸಂಸ್ಥೆಗಳು
* ಸರ್ವ ಭಾರತೀಯ ಶಿಕ್ಷಾ ಪೀಠ, ತುಮಕೂರು
* ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ, ಬೆಂಗಳೂರು
►ರಾಜ್ಯವಾರು ನಕಲಿ ಸಂಸ್ಥೆಗಳ ಪಟ್ಟಿ (ಫೆಬ್ರವರಿ 2026ರ ವರೆಗೆ)
►ಆಂಧ್ರಪ್ರದೇಶ (2)
1. ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯೂನಿವರ್ಸಿಟಿ, ಗುಂಟೂರು
2. ಬೈಬಲ್ ಓಪನ್ ಯೂನಿವರ್ಸಿಟಿ ಆಫ್ ಇಂಡಿಯಾ, ವಿಶಾಖಪಟ್ಟಣಂ
►ಅರುಣಾಚಲ ಪ್ರದೇಶ (1)
* ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್
►ದಿಲ್ಲಿ (12)
1. ವರ್ಲ್ಡ್ ಪೀಸ್ ಆಫ್ ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ (WPUNU)
2. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಇಂಜಿನಿಯರಿಂಗ್
3. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ & ಫಿಸಿಕಲ್ ಹೆಲ್ತ್ ಸೈನ್ಸಸ್ (AIIPHS) ಸ್ಟೇಟ್ ಗವರ್ನ್ಮೆಂಟ್ ಯೂನಿವರ್ಸಿಟಿ
4. ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್
5. ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ
6. ವೊಕೇಷನಲ್ ಯೂನಿವರ್ಸಿಟಿ
7. ADR-ಸೆಂಟ್ರಿಕ್ ಜುರಿಡಿಕಲ್ ಯೂನಿವರ್ಸಿಟಿ
8. ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್ ಆಂಡ್ ಇಂಜಿನಿಯರಿಂಗ್
9. ವಿಶ್ವಕರ್ಮ ಓಪನ್ ಯೂನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ಮೆಂಟ್
10. ಆಧ್ಯಾತ್ಮಿಕ ಯೂನಿವರ್ಸಿಟಿ
11. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೊಲ್ಯೂಷನ್
12. ಮೌಂಟೇನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಟೆಕ್ನಾಲಜಿ
ಹರಿಯಾಣ (1)
* ಮ್ಯಾಜಿಕ್ & ಆರ್ಟ್ ಯೂನಿವರ್ಸಿಟಿ, ಫರಿದಾಬಾದ್
ಜಾರ್ಖಂಡ್ (1)
* ದಕ್ಷ ಯೂನಿವರ್ಸಿಟಿ (ವೊಕೇಷನಲ್ ಆಂಡ್ ಲೈಫ್ ಸ್ಕಿಲ್ ಎಜುಕೇಷನ್), ರಾಂಚಿ
ಕೇರಳ (2)
1. ಇಂಟರ್ನ್ಯಾಷನಲ್ ಇಸ್ಲಾಮಿಕ್ ಯುನಿವರ್ಸಿಟಿ ಆಫ್ ಪ್ರೊಫೆಟಿಕ್ ಮೆಡಿಸಿನ್ (IIUPM), ಕೋಝಿಕ್ಕೋಡ್
2. ಸೇಂಟ್ ಜಾನ್ಸ್ ಯೂನಿವರ್ಸಿಟಿ
ಮಹಾರಾಷ್ಟ್ರ (2)
1. ರಾಜಾ ಅರೇಬಿಕ್ ಯೂನಿವರ್ಸಿಟಿ, ನಾಗ್ಪುರ
2. ನ್ಯಾಷನಲ್ ಬ್ಯಾಕ್ವರ್ಡ್ ಕೃಷಿ ವಿದ್ಯಾಪೀಠ, ಸೊಲ್ಲಾಪುರ
ಪುದುಚೇರಿ (2)
1. ಉಷಾ ಲಚ್ಚುಮನನ್ ಕಾಲೇಜ್ ಆಫ್ ಎಜುಕೇಶನ್
2. ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್
ರಾಜಸ್ಥಾನ (1)
* ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್, ಭಿವಾಡಿ
ಉತ್ತರ ಪ್ರದೇಶ (4)
1. ಗಾಂಧಿ ಹಿಂದಿ ವಿದ್ಯಾಪೀಠ, ಪ್ರಯಾಗರಾಜ್
2. ನೇತಾಜಿ ಸುಭಾಷ್ ಚಂದ್ರ ಬೋಸ್ ಯೂನಿವರ್ಸಿಟಿ (ಓಪನ್ ಯೂನಿವರ್ಸಿಟಿ), ಅಲಿಘರ್
3. ಭಾರತೀಯ ಶಿಕ್ಷಾ ಪರಿಷತ್, ಲಕ್ನೋ
4. ಮಹಾಮಾಯ ಟೆಕ್ನಿಕಲ್ ಯೂನಿವರ್ಸಿಟಿ, ನೋಯ್ಡಾ
ಪಶ್ಚಿಮ ಬಂಗಾಳ (2)
1. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಕೋಲ್ಕತ್ತಾ
2. ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಆಂಡ್ ರಿಸರ್ಚ್ , ಕೋಲ್ಕತ್ತಾ
ಮಾನ್ಯತೆ ಇಲ್ಲದ ಸಂಸ್ಥೆಗಳಿಂದ ಪದವಿ ಪಡೆದರೆ ಭವಿಷ್ಯದಲ್ಲಿ ಉದ್ಯೋಗ ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ, ವಿದ್ಯಾರ್ಥಿಗಳು ಎಚ್ಚರಿಕೆಯಿಂದಿರಬೇಕು ಎಂದು ಯುಜಿಸಿ ಪುನರುಚ್ಚರಿಸಿದೆ.

