HEALTH TIPS

ಟ್ರಂಪ್‌ ಸುಂಕ ವೈಫಲ್ಯ ಸೆನ್ಸೆಕ್ಸ್‌ 480 ಅಂಕ ಜಿಗಿತ ನಿಫ್ಟಿ 25,713ಕ್ಕೆ ಏರಿಕೆ ಕಾರಣವೇನು?

ನವದೆಹಲಿ: ಸೆನ್ಸೆಕ್ಸ್‌ (Sensex) ಇವತ್ತು 480 ಅಂಕ ಏರಿಕೆಯಾಗಿ 83,295ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು. ನಿಫ್ಟಿ 142 ಅಂಕ ಏರಿಕೆಯಾಗಿ (Stock Market) 25,713ಕ್ಕೆ ಸ್ಥಿರವಾಯಿತು. ಅಮೆರಿಕದ ಸುಪ್ರೀಂಕೋರ್ಟ್‌, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸುಂಕಗಳನ್ನು ಕಾನೂನು ಬಾಹಿರ ಎಂದು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೋಮವಾರ ಚೇತರಿಸಿದೆ.

ಸದ್ಯಕ್ಕೆ ಡೊನಾಲ್ಡ್‌ ಟ್ರಂಪ್‌ 15 ಪರ್ಸೆಂಟ್‌ ತಾತ್ಕಾಲಿಕ ಟಾರಿಫ್‌ ವಿಧಿಸಿದ್ದಾರೆ.

ಅದಾನಿ ಪೋರ್ಟ್ಸ್‌ ಷೇರು ದರ 3 ಪರ್ಸೆಂಟ್‌, ಡಾ ರೆಡ್ಡೀಸ್‌ 2 ಪರ್ಸೆಂಟ್‌ ಏರಿಕೆ ದಾಖಲಿಸಿತು. ಇವತ್ತು ಫೈನಾನ್ಸಿಯಲ್‌ ಷೇರುಗಳು ಹೆಚ್ಚಿನ ಲಾಭ ಗಳಿಸಿತು. ಪಿಎಸ್‌ಯು ಬ್ಯಾಂಕ್‌, ರಿಯಾಲ್ಟಿ ಮತ್ತು ಆಟೊಮೊಬೈಲ್‌ ಷೇರುಗಳು ಲಾಭ ಗಳಿಸಿತು. ದೇಶೀಯ ಆರ್ಥಿಕ ಬೆಳವಣಿಗೆ ಹೂಡಿಕೆದಾರರ ವಿಶ್ವಾಸ ವೃದ್ಧಿಸಿತು. ರಕ್ಷಣಾ ವಲಯದ ಷೇರುಗಳೂ ಏರಿತು. ಐಟಿ ಮತ್ತು ಕೆಮಿಕಲ್ಸ್‌ ಷೇರುಗಳು ಮಂದಗತಿಯಲ್ಲಿತ್ತು. ಡಾಲರ್‌ ಎದುರು ರುಪಾಯಿ ಮೌಲ್ಯ 90 ರುಪಾಯಿ 88 ಪೈಸೆ ಇತ್ತು.

ಇಂದು ಸ್ಟಾಕ್ಸ್‌ ಮಾರ್ಕೆಟ್‌ ಸೂಚ್ಯಂಕ ಏರಿಕೆಗೆ 4 ಕಾರಣಗಳು:

  1. ಟ್ರಂಪ್‌ ಸುಂಕದ ವಿರುದ್ಧ ಅಮೆರಿಕದ ಸುಪ್ರೀಂಕೋರ್ಟ್‌ ತೀರ್ಪು
  2. ಕಚ್ಚಾ ತೈಲ ದರ ಇಳಿಕೆ
  3. ಡಾಲರ್‌ ಎದುರು ರುಪಾಯಿ ಪ್ರಬಲ
  4. ಹಣಕಾಸು ವಲಯದಲ್ಲಿ ಚೇತರಿಕೆ

ನಿಫ್ಟಿ 50ಯಲ್ಲಿ ಲಾಭ ಗಳಿಸಿದ ಷೇರುಗಳು:

ಅದಾನಿ ಪೋರ್ಟ್ಸ್:‌ 1,556/- ( 2.94%)

ಕೋಟಕ್‌ ಬ್ಯಾಂಕ್:‌ 430/- (2.22%)

ಡಾ. ರೆಡ್ಡೀಸ್:‌ 1,307/- (2.11%)

HDFC Life: 742/- (1.90%)

ನೆಸ್ಲೆ ಇಂಡಿಯಾ: 1,315/- ( 1.65%)

ಅಲ್ಟ್ರಾಟೆಕ್‌ ಸಿಮೆಂಟ್:‌ 12,976/- (1.65%)

ಪವರ್‌ ಗ್ರಿಡ್:‌ 303/- ( 1.48%)

ನಿಫ್ಟಿ 50ಯಲ್ಲಿ ನಷ್ಟಕ್ಕೀಡಾದ ಷೇರುಗಳು:

ಕ್ವಾಲಿಟಿ ವಾಲ್ಸ್:‌ 27/-

ಹಿಂಡಾಲ್ಕೊ: 916/-

ಇನ್ಫೋಸಿಸ್:‌ 1,328/-

ವಿಪ್ರೊ: 205/-

ಟೆಕ್‌ ಮಹೀಂದ್ರಾ : 1,441/-

ಸಿಪ್ಲಾ: 1,327/-

ಒಎನ್‌ಜಿಸಿ: 275/-

ಯಾವ ಸೆಕ್ಟರ್‌ ಹೇಗಿತ್ತು?

ಇವತ್ತು ನಿಫ್ಟಿ ಪಿಎಸ್‌ಯು ಬ್ಯಾಂಕ್‌ 1.36%, ಹಣಕಾಸು ಸೇವೆ 0.87%, ಆಟೊಮೊಬೈಲ್‌ 0.83%, ಎಫ್‌ಎಂಸಿಜಿ 0.70% ಏರಿಕೆ ಆಗಿತ್ತು. ನಿಫ್ಟಿ ಬ್ಯಾಂಕ್‌ 0.15% ಚೇತರಿಸಿತ್ತು. ಮತ್ತೊಂದು ಕಡೆ ನಿಫ್ಟಿ ಐಟಿ 1.42% ಇಳಿದಿತ್ತು. ಲೋಹ 0.23%, ರಿಯಾಲ್ಟಿ 0.19% ತಗ್ಗಿತ್ತು. ವಾಲ್ಯೂಮ್‌ ದೃಷ್ಟಿಯಿಂದ ಹೆಚ್ಚು ಸಕ್ರಿಯವಾಗಿ ಟ್ರೇಡ್‌ ಆದ ಷೇರುಗಳು: ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ( 62 ಕೋಟಿ ಷೇರುಗಳು), ವೊಡಾಫೋನ್‌ ಐಡಿಯಾ ( 38 ಕೋಟಿ ಷೇರುಗಳು), ಟಾಟಾ ಸಿಲ್ವರ್‌ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್ (‌27 ಕೋಟಿ ಷೇರು). ಇಂದಿನ ಬಿಎಸ್‌ಇನಲ್ಲಿ 1,900 ಷೇರುಗಳು ಲಾಭ ಗಳಿಸಿದರೆ 2,400 ಷೇರುಗಳು ನಷ್ಟಕ್ಕೀಡಾಯಿತು.

ಐಟಿ ಸ್ಟಾಕ್ಸ್‌ಗಳ ನಷ್ಟ ಮುಂದುವರಿಕೆಯಿಂದ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಗೆ ಆದಾಯ ಇಳಿಕೆಯಾಗುವ ನಿರೀಕ್ಷೆ ಉಂಟಾಗಿದೆ. ರಿಟೇಲ್‌ ಹೂಡಿಕೆದಾರರು ತಮ್ಮ ಸಿಪ್‌ ಹೂಡಿಕೆ ಬಗ್ಗೆ ಸ್ವಲ್ಪ ಆತಂಕದಲ್ಲಿದ್ದಾರೆ. ಹಲವಾರು ಮ್ಯೂಚುವಲ್‌ ಫಂಡ್‌ಗಳು ಐಟಿ ಕಂಪನಿಗಳ ಷೇರುಗಳಲ್ಲಿ ಭಾರಿ ಹೂಡಿಕೆ ಮಾಡಿವೆ. ಒಟ್ಟಾರೆ ಪೋರ್ಟ್‌ ಫೋಲಿಯೊ ಪರ್ಫಾಮೆನ್ಸ್‌ ಮೇಲೆ ಇದರಿಂದ ಪರಿಣಾಮ ಉಂಟಾಗಲಿದೆಯೇ ಎಂಬ ಕಳವಳ ಈಗ ಇದೆ.

ಬಂಗಾರದ ದರದಲ್ಲಿ ಇವತ್ತು 2,070 ರುಪಾಯಿ ಏರಿಕೆಯಾಗಿದೆ. 24 ಕ್ಯಾರಟ್‌ನ 10 ಗ್ರಾಮ್‌ ಚಿನ್ನದ ದರ 1,61,350 ರೂ. ಕ್ಕೆ ಏರಿಕೆಯಾಗಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಬಂಗಾರದ ದರದಲ್ಲಿ 1,900 ರುಪಾಯಿ ಏರಿದ್ದು, 1,47,900 ರುಪಾಯಿಗೆ ಏರಿಕೆಯಾಗಿದೆ. ಬೆಳ್ಳಿಯ ದರ ಕೆಜಿಗೆ 3 ಲಕ್ಷ ರುಪಾಯಿಗೆ ಏರಿದ್ದು, 25,000 ರೂ. ಹೆಚ್ಚಳವಾಗಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಷೇರುಗಖ ದರದಲ್ಲಿ ಫೆಬ್ರವರಿಯಲ್ಲಿ 14% ಇಳಿಕೆಯಾಗಿದೆ. ಎಐ ತಂತ್ರಜ್ಞಾನದ ಆತಂಕ ಇದಕ್ಕೆ ಕಾರಣವಾಗಿದೆ. ಕಳೆದ ಅಕ್ಟೋಬರ್-ಡಿಸೆಂಬರ್‌ ಅವಧಿಯಲ್ಲಿ ಟಿಸಿಎಸ್‌ ಲಾಭದಲ್ಲಿ 14 ಪರ್ಸೆಂಟ್‌ ಇಳಿಕೆ ಆಗಿತ್ತು. ಹೀಗಿದ್ದರೂ ಆದಾಯ 67,087 ಕೋಟಿ ರುಪಾಯಿಗೆ ಅಂದ್ರೆ 5 ಪರ್ಸೆಂಟ್‌ ಹೆಚ್ಚಳವಾಗಿತ್ತು.

ಕಳೆದ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದಲ್ಲಿ ಲಿಸ್ಟೆಡ್‌ ಬ್ಯಾಂಕ್‌ಗಳ ಒಟ್ಟು ನಿವ್ವಳ ಲಾಭವು 1 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದೆ. ಇದೊಂದು ದಾಖಲೆಯಾಗಿದೆ. ಖಾಸಗಿ ಬ್ಯಾಂಕ್‌ಗಳು 47,895 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದ್ದರೆ, ಪಿಎಸ್‌ಯು ಬ್ಯಾಂಕ್‌ಗಳು 52,604 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries