ಮಂಜೇಶ್ವರ : ಮಂಜೇಶ್ವರ ಶಾಸಕರು ಮುಸ್ಲಿಂ ಸಮುದಾಯ ಮತಗಳ ಕ್ರೂಡಿಕಾರಣಕ್ಕಾಗಿ ಬೇಜವಾಬ್ದಾರಿ ಹಾಗೂ ಅನಗತ್ಯ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಕೋಮು ಭಾವನೆ ಕೆರಳಿಸಿ ತನ್ನ ಮತ ಬ್ಯಾಂಕ್ ಭದ್ರಪಡಿಸಲು ಕಪಟ ನಾಟಕ ಮಾಡುತಿದ್ದರೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅರೂಪಿಸಿದರು
ಇತ್ತೀಚಿಗೆ ದನ ಸಾಗಾಟ ಮಾಡುವ ಕಂಟೈನರ್ ಡ್ರೈವರ್ ಹಾಗೂ ರಿಕ್ಷಾ ಪ್ರಯಾಣಿಕರ ಮದ್ಯೆ ರಾತ್ರಿ ರಸ್ತೆಯಲ್ಲಿ ಉಂಟಾದ ವೈಯಕ್ತಿಕ ವಿಚಾರದಲ್ಲಿ ಉಂಟಾದ ವೈಯಕ್ತಿಕ ಗಲಾಟೆಯನ್ನು ಕೋಮು ಗಲಭೆ ಎಂದು ಹೇಳಿ, ಮಂಜೇಶ್ವರ ದಲ್ಲಿ ಉತ್ತರ ಭಾರತ ಮಾಡೆಲ್ ಎಂದೆಲ್ಲ ಡೈಲಾಗ್ ಬಿಟ್ಟು ಜನರ ಧಾರ್ಮಿಕ ಭಾವನೆ ಯ ಜೊತೆ ಚೆಲ್ಲಾಟವಾಡಿ ತನ್ನ ಮತ ಬ್ಯಾಂಕ್ ಭದ್ರಪಡಿಸಲು ಕೀಳು ಮಟ್ಟದ ರಾಜಕೀಯ ಮಾಡುತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ದನ ಸಾಗಾಟ ವಾಹನ ಹಾಗೂ ರಿಕ್ಷಾ ಪ್ರಯಾಣಿಕರ ಮದ್ಯೆ ಉಂಟಾದ ಗಲಾಟೆಯಲ್ಲಿ ಪೋಲೀಸ್ ಇಲಾಖೆ 6 ಜನರನ್ನು ಬಂಧಿಸಿ 4 ಜನರ ಹೆಸರನ್ನು ಮಾತ್ರ ಪತ್ರಿಕೆಗಳಿಗೆ ನೀಡಿದೆ.
ಉಳಿದ ಇಬ್ಬರನ್ನು ಪ್ರಾಯಪೂರ್ತಿ ಆಗದವರು ಎಂದು ಹೆಸರು ಪ್ರಕಟಿಸಿಲ್ಲ. ಪ್ರಕರಣದ ಎಲ್ಲಾ ಆರೋಪಿಗಳ ಹೆಸರು ಬಹಿರಂಗಪಡಿಸಲು ಬಿಜೆಪಿ ಅಗ್ರಹಿಸಿದೆ. ಹೆಸರು ಪ್ರಕಟಿಸದ ಪ್ರಾಯ ಪೂರ್ತಿ ಆಗದವರ ಹೆಸರು ಬಹಿರಂಗವಾದರೆ ಈ ಪ್ರಕರಣದ ಸತ್ಯಾಸತ್ಯತೆ ಹೊರಬರುತ್ತದೆ.
ಮಂಜೇಶ್ವರ ಶಾಸಕರು ಹಿಂದೂ ಭೀಕರತೆ ಎಂದು ಬಿಂಬಿಸಲು ಹೊರಟ ಕಪಟ ನಾಟಕವು ಹೊರ ಬರುತ್ತೆ. ಕೋಮು ಭಾವನೆಯಂತಹ ಸೂಕ್ಷ್ಮ ವಿಚಾರವನ್ನು ನಿಯಂತ್ರಣ ಮಾಡಬೇಕಾದ ಜವಾಬ್ದಾರಿಯುತ ಶಾಸಕರು ಸಮಾಜದಲ್ಲಿ ಕೋಮು ಭಾವನೆ ಕೆರಳಿಸಿ ಅಂದ ನೋಡುವುದಲ್ಲ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಮಂಜೇಶ್ವರ ಶಾಸಕರ ಕೀಳು ಮಟ್ಟದ ರಾಜಕೀಯವನ್ನು ಖಂಡಿಸಿದೆ.

