HEALTH TIPS

ಗೋಸಾಡ ಶ್ರೀಕ್ಷೇತ್ರದಲ್ಲಿ ವಿಶೇಷ ಸಭೆ

ಮುಳ್ಳೇರಿಯ: ಗೋಸಾಡ ಶ್ರೀ ಮಹಿಷಮರ್ಧಿನಿ ಕ್ಷೇತ್ರದ ಪ್ರತಿಷ್ಠಾ ದಿನ ಮಹೋತ್ಸವ ಹಾಗೂ ಶ್ರೀ ಕ್ಷೇತ್ರದಲ್ಲಿ ಮೇ 5 ಮತ್ತು 6 ನೇ ತಾರೀಕಿಗೆ ನಡೆಯಲಿರುವ ಚಂಡಿಕಾಯಾಗ ಹಾಗೂ ವಿಶೇಷ ಮೂಡಪ್ಪ ಸೇವೆಯನ್ನು ಯಶಸ್ವಿಗೊಳಿಸಲು ವಿಶೇಷ ಸಭೆ ಜರಗಿತು.  ಸಭೆಯ ಅಧ್ಯಕ್ಷತೆಯನ್ನು ಸೇವಾ ಸಮಿತಿಯ ಅಧ್ಯಕ್ಷ ಅನಂತ ಭಟ್ ಕುರುಮುಜ್ಜಿ ವಹಿಸಿದರು. ತಂತ್ರಿ ಶಂಕರನಾರಾಯಣ ಶರ್ಮ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ನಡೆಯುವ ಪುಣ್ಯ ಕಾರ್ಯದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ ಅವರು ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದರಿಂದ ಕ್ಷೇತ್ರದ ಪಾವಿತ್ರ್ಯತೆ ಉತ್ತುಂಗಕ್ಕೇರಲಿದೆ ಎಂದು ತಿಳಿಸಿದರು. 

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಸತ್ಯಮೂರ್ತಿ ಅಮ್ಮಣ್ಣಾಯ ಪಾವೂರು, ಶಂಕರನಾರಾಯಣ ಮಯ್ಯ ಬದಿಯಡ್ಕ, ಐತ್ತಪ್ಪ ಮವ್ವಾರು, ಗಂಗಾಧರ ರೈ ಮಠದಮೂಲೆ, ಬಾಲಕೃಷ್ಣ ಕೆ.ಕೆ. ಏತಡ್ಕ, ರಾಧಾಕೃಷ್ಣ ನಾಯರ್ ಪಾವೂರು ಮೂಲೆ, ಸೀತಾರಾಮ ರೈ ಮುಂಡ್ರಕೊಳಂಜಿ, ಪ್ರಸಾದ ಮಣಿಯಾಣಿ ಗೋಸಾಡ ಉಪಸ್ಥಿತರಿದ್ದರು. ಕ್ಷೇತ್ರದ ಸೇವಾ ಸಮಿತಿಯ ಉಪಾಧ್ಯಕ್ಷ ಪ್ರಭಾಕರ ರೈ ಮಠದಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರದ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಸ್ವಾಗತಿಸಿ, ಸೇವಾ ಸಮಿತಿಯ ಕಾರ್ಯದರ್ಶಿ ಸದಾಶಿವ ರೈ ಗೋಸಾಡ ವಂದಿಸಿದರು.  

ಕಾರ್ಯಕ್ರಮದ ಯಶಸ್ವಿಗೆ ಸಲಹಾ ಸಮಿತಿ ರೂಪಿಕರಿಸಲಾಯಿತು. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಐತ್ತಪ್ಪ ಮವ್ವಾರು, ಶಂಕರನಾರಾಯಣ ಮಯ್ಯ ಬದಿಯಡ್ಕ, ಬಾಲಕೃಷ್ಣ ಕೆ.ಕೆ. ಏತಡ್ಕ, ಸೀತಾರಾಮ ರೈ ಮುಂಡ್ರಕೊಳಂಜಿ, ಸುಧಾಮ ಗೋಸಾಡ, ಗಂಗಾಧರ ರೈ ಮಠದಮೂಲೆ, ಅಮೃತರಾಜ್ ರೈ ಮರತ್ತಿಲ, ವಾಣಿಪ್ರಸಾದ್ ಪಾವೂರು ಇವರನ್ನು ಆಯ್ಕೆ ಮಾಡಲಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries