ಪೆರ್ಲ: ನಾಲಂದ ಕಾಲೇಜು ಆಫ್ ಆಟ್ರ್ಸ್ ಅಂಡ್ ಸೈನ್ಸ್ ಪೆರ್ಲ ಕಾಲೇಜಿನ ದ್ವಿತೀಯ ವರ್ಷದ ಬಿ.ಎ. ಅರ್ಥಶಾಸ್ತ್ರ ವಿದ್ಯಾರ್ಥಿಗಳು ಹಾಸ್ಪಿಟಲ್ ಎಕನಾಮಿಕ್ಸ್ ಪಠ್ಯದ ಅಂಗವಾಗಿ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಅಧ್ಯಯನ ಭೇಟಿಯನ್ನು ನಡೆಸಿದರು.
ಆಸ್ಪತ್ರೆಯ ಕಾರ್ಯಾಚರಣ ಸೂಚಕಗಳನ್ನು ಗಣನೆ ಮಾಡುವ ಉದ್ದೇಶದಿಂದ ಈ ಭೇಟಿ ಆಯೋಜಿಸಲಾಗಿತ್ತು. ಆಸ್ಪತ್ರೆಯ ಕಾರ್ಯದರ್ಶಿ ಪ್ರದೀಪ್ ಹಾಗೂ ಮೆಡಿಕಲ್ ಸುಪರಿಟಂಡ್‍ಂಟ್ ಸರಸ್ವತಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಂಪೂರ್ಣ ಸಹಕಾರ ನೀಡಿದರು.
ಅಧ್ಯಯನ ಭೇಟಿಯಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಶಂಕರ ಖಂಡಿಗೆ ಹಾಗೂ ಅರ್ಥಶಾಸ್ತ್ರ ಸಹಪ್ರಾಧ್ಯಾಪಕಿ ಅನುಪಮಾ ಟಿ. ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಭೇಟಿ ವಿದ್ಯಾರ್ಥಿಗಳ ತಾತ್ವಿಕ ಜ್ಞಾನವನ್ನು ಪ್ರಾಯೋಗಿಕ ಅನುಭವದೊಂದಿಗೆ ಸಂಯೋಜಿಸುವ ಮಹತ್ವದ ಶೈಕ್ಷಣಿಕ ಕಾರ್ಯಕ್ರಮವಾಗಿ ಪರಿಣಮಿಸಿತು.

.jpg)
