HEALTH TIPS

ಮಹಿಳೆಯ ಉದರದಲ್ಲಿ ಕತ್ತರಿ ಸಿಲುಕಿದ ಘಟನೆ: ಪ್ರಕರಣ ದಾಖಲಿಸಿದ್ದು ಓರ್ವೆ ವೈದ್ಯೆಯ ವಿರುದ್ಧ ಮಾತ್ರ; ಇಬ್ಬರ ಅಮಾನತು

 ಆಲಪ್ಪುಳ: ಆಲಪ್ಪುಳ ವೈದ್ಯಕೀಯ ಕಾಲೇಜಿನಲ್ಲಿ ೫ ವರ್ಷ ಗಳ ಹಿಂದೆ ಶಸ್ತ್ರಕ್ರಿಯೆಗೊಳಗಾದ ಅಂಬಲಪುಳದ ಉಷಾ ಜೋಸೆಫ್ (52)ರ ಉದರದಲ್ಲಿ ಕತ್ತರಿ ಸಿಲುಕಿಕೊಂಡ ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಪ್ರಸ್ತುತ ವೈದ್ಯಕೀಯ ಕಾಲೇಜಿನಲ್ಲಿ ಅಂದು ಹೆರಿಗೆ  ವಿಭಾಗದ ಮುಖ್ಯಸ್ಥರಾಗಿದ್ದ ಡಾ| ಲಲಿತಾಂಬಿಕರ ಹೆಸರಲ್ಲಿ ಮಾತ್ರವೇ ಈ ಪ್ರಕರಣ ದಾಖಲಿಸಲಾಗಿದೆ.  ಉಷಾ ಜೋಸೆಫ್‌ರ ಸಂಬಂಧಿಕರು ನೀಡಿದ ದೂರಿನಂತೆ ಅಂಬಲಪುಳ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

2021 ಮೇ 12ರಂದು ಉಷಾ ಜೋಸೆಫ್‌ರನ್ನು ಶಸ್ತ್ರಕ್ರಿಯೆಗೊಳಪಡಿಸ ಲಾಗಿತ್ತು. ಅಂದು ಡಾ| ಲಲಿತಾಂಬಿಕೆ ಮಾತ್ರವಲ್ಲದೆ ಡಾ| ಶಾಹಿದ ಮತ್ತು ನರ್ಸಿಂಗ್ ಆಫೀಸರ್ ಟಿ.ಎಸ್. ಧನ್ಯ ಎಂಬವರು ಸೇರಿ ಈ ಶಸ್ತ್ರಕ್ರಿಯೆ ನಡೆಸಿದ್ದರು. ಆದರೆ ಡಾ| ಶಾಹಿದ ಮತ್ತು ನರ್ಸಿಂಗ್ ಆಫೀಸರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಜ್ಯಾರಿಯಲ್ಲಿ ಡಾ| ಶಾಹಿದ ತಿರುವನಂತಪುರ ಐಟಿಐನಲ್ಲಿ  ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಷಾ ಜೋಸೆಫ್‌ರ ಸಂಬಂಧಿಕರು ನೀಡಿದ ದೂರಿನಲ್ಲಿ ಡಾ| ಲಲಿತಾಂಬಿಕರ ವಿರುದ್ಧ ಮಾತ್ರವೇ ಆರೋಪ ಹೊರಿಸಲಾಗಿತ್ತು. ಅದರಲ್ಲಿ ಡಾ| ಶಾಹಿದ ಮತ್ತಿತರರ ಹೆಸರನ್ನು ಉಲ್ಲೇಖಿಸಲಾಗಿಲ್ಲವೆಂದು ಅದರಿಂದಾಗಿ ಇತರರನ್ನು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಒಳಪಡಿಸಲಾಗಿಲ್ಲವೆಂಬ ಕಾರಣವನ್ನು ಇದಕ್ಕೆ  ಪೊಲೀಸರು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಉಷಾ ಜೋಸೆಫ್‌ರ ಶಸ್ತ್ರಕ್ರಿಯೆ ನಡೆಸಿದ ವೈದ್ಯಕೀಯ ತಂಡದಲ್ಲಿದ್ದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗು ವುದೆಂದೂ ಮಾತ್ರವಲ್ಲ ಅದರಲ್ಲಿ ಇಬ್ಬರನ್ನು ಈಗಾಗಲೇ ಸೇವೆಯಿಂದ ಅಮಾನತುಗೊಳಿಸಲಾಗಿದೆಯೆಂದು ಆರೋಗ್ಯ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries