ಕಾಸರಗೋಡು: ನಗರದ ಎಸ್.ವಿ.ಟಿ ರಸ್ತೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಶ್ರೀ ಪುರಂದರದಾಸ ಸಂಗೀತ ಕಲಾ ಮಂದಿರದ 22 ನೇ "ದ್ವಿದಿನ ಸಂಕೀರ್ತನಾ ಆರಾಧನೋತ್ಸವ" ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಜರುಗಿತು.
ಭಾವೈಕ್ಯರಾದ ಸಂಗೀತ ವಿದ್ವಾನ್ ರಮಣ ಮಾಸ್ಟರ್ ಅವರ ಶುಭಾನುಗ್ರಹ ಹಾಗೂ ಶತಾಯುಷಿ ಮೃದಂಗ ವಿದ್ವಾನ್ ಬಾಬು ರೈ ಇವರ ಶುಭಾಶೀರ್ವಾದಗಳೊಂದಿಗೆ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಸಮಿತಿ ಮುಖ್ಯಸ್ಥ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಸಮಾರಂಭ ಉದ್ಘಾಟಿಸಿದರು.
ಸಂಸ್ಥೆಯ ಸ್ಥಾಪಕ ರೂವಾರಿ ಕಲ್ಮಾಡಿ ಸದಾಶಿವ ಆಚಾರ್ಯ, ಕನ್ನಡ ಭವನದ ರೂವಾರಿ ಡಾ. ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್, ಮನಮೋಹನ ಕೆರೆಮನೆ, ಪ್ರಜಿತ್, ಶ್ರೀಧರ್ ಭಟ್, ಬಾಲರಾಜ್ ಉಪಸ್ಥಿತರಿದ್ದರು. ಕರ್ಯಕ್ರಮದ ಅಂಗವಾಗಿ ಸಂಗೀತ ವಿದ್ವಾಂಸರುಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.


