ಕೋಝಿಕೋಡ್: ಚಂದ್ರ ಕಾಣದ ಕಾರಣ, ಕೇರಳದಲ್ಲಿ ರಂಜಾನ್ ಮಾ ಗುರುವಾರದಿಂದ (ಫೆಬ್ರವರಿ 19) ಆರಂಭಗೊಳ್ಳಲಿದೆ ಎಂದು ವಿವಿಧ ಖಾಜಿಗಳು ಘೋಷಿಸಿದ್ದಾರೆ. ಜಂಟಿ ಮಹಲ್ ಖಾಜಿಗಳಾದ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ಸಿ. ಮುಹಮ್ಮದ್ ಫೈಜಿ ಪ್ರತಿನಿಧಿ ಪಾಣಕ್ಕಾಡ್ ಸೈಯದ್ ಸಾದಿಕಾಲಿ ಶಿಹಾಬ್ ತಂಙಳ್, ಸೈಯದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ಮತ್ತು ಇತರರು ಗುರುವಾರದಿಂದ ರಂಜಾನ್ ಉಪವಾಸ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಇದರೊಂದಿಗೆ, ಶಾಬಾನ್ 30 ಅನ್ನು ಪೂರ್ಣಗೊಳಿಸಬಹುದು ಮತ್ತು ನಾಳೆಯಿಂದ ರಂಜಾನ್ ಉಪವಾಸ ಪ್ರಾರಂಭಿಸಬಹುದೆಂದು ತಿಳಿಸಲಾಗಿದೆ.
ಕೇರಳ ಹಿಲಾಲ್ ಸಮಿತಿಯ ಅಧ್ಯಕ್ಷ ಪಿ.ಪಿ. ಉಣ್ಣೀನ್‍ಕುಟ್ಟಿ ಮೌಲವಿ ಅವರು ಫೆಬ್ರವರಿ 19 ರ ಗುರುವಾರ ರಂಜಾನ್ ಆರಂಭಗೊಳ್ಳುವುದೆಂದಿದ್ದಾರೆ.
ಸೌದಿ ಅರೇಬಿಯಾದಲ್ಲಿ ಅರ್ಧಚಂದ್ರ ಕಾಣಿಸಿದ ಹಿನ್ನೆಲೆಯಲ್ಲಿ, ಒಮಾನ್ ಹೊರತುಪಡಿಸಿ ಕೊಲ್ಲಿ ರಾಷ್ಟ್ರಗಳಲ್ಲಿ ಬುಧವಾರ ರಂಜಾನ್ ಪ್ರಾರಂಭವಾಗಲಿದೆ. ಒಮಾನ್‍ನಲ್ಲಿ ಗುರುವಾರ ಉಪವಾಸ ಆರಂಭವಾಗಲಿದೆ. ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈತ್ ಮತ್ತು ಬಹ್ರೇನ್‍ನಲ್ಲಿ ಬುಧವಾರ ಉಪವಾಸ ಆರಂಭವಾಗಲಿದೆ.

