ಸಮರಸ ಚಿತ್ರಸುದ್ದಿ: ಮಂಜೇಶ್ವರ: ಕೇರಳ ಸ್ಟೇಟ್ ಭಾರತ್ ಸ್ಕೌಟ್ಸ್-ಗೈಡ್ಸ್ ನಡೆಸುವ 2025-26 ನೇ ಸಾಲಿನ ರಾಜ್ಯ ಪುರಸ್ಕಾರ ಟೆಸ್ಟಿಂಗ್ ಕ್ಯಾಂಪ್ ನಲ್ಲಿ ಭಾಗವಹಿಸಿ, ರಾಜ್ಯ ಪುರಸ್ಕಾರ ಪ್ರಶಸ್ತಿ ಪಡೆದ ಶ್ರೀ ವಾಣಿ ವಿಜಯ ಹೈಸ್ಕೂಲು ಕೊಡ್ಲಮೊಗರು ಶಾಲೆಯ ವಿದ್ಯಾರ್ಥಿಗಳಾದ ಸೃಜನ್ ಎಂ.ಬಿ, 2)ತನುಷ್ ಎನ್ ನಾಯಕ್, 3)ಕಾರ್ತಿಕ್, 4)ತೌಶಿಕ್, 5)ಧನುಷ್,6) ಪ್ರತೀಕ್.
7)ಗೈಡ್ಸ್ ವಿದ್ಯಾರ್ಥಿನಿಯರಾದ ನಿಶ್ಮಿತ, 8)ಶರಣ್ಯ, 9)ಹಿತಾಶ್ರೀ, 10)ಅಕ್ಷದಾ ಶ್ಯಾಮ್, 11)ಕೀರ್ತನ,12) ಶ್ರಾವ್ಯಶ್ರೀ.
ಈ ವಿದ್ಯಾರ್ಥಿಗಳಿಗೆ ಸ್ಕೌಟ್ ಮಾಸ್ಟರ್, ಸತ್ಯ ಶಂಕರ್ ಭಟ್ ಹಾಗು ವಿದ್ಯಾರ್ಥಿನಿಯರಿಗೆ ಗೈಡ್ ಕ್ಯಾಪ್ಟನ್ ಸುಜಯಶ್ರೀ ಐಲ್ ತರಬೇತಿ ನೀಡಿದ್ದಾರೆ. ಈ ಸಾಧನೆಗೆ ಶಾಲಾ ಪ್ರಬಂಧಕ ಶಂಕರ್ ಮೋಹನ್ ಪೂಂಜ, ಮುಖ್ಯ ಶಿಕ್ಷಕಿ ಕೃಷ್ಣವೇಣಿ ಹಾಗೂ ರಕ್ಷಕ ಶಿಕ್ಷಕ ಸಂಘ ಅಭಿನಂದಿಸಿದೆ.

-side.jpg)
-side.jpg)
