HEALTH TIPS

ನಕಲಿ ಕರೆ ಬಗ್ಗೆ ಗ್ರಾಹಕರನ್ನು ಎಚ್ಚರಿಸಿದ HDFC ಬ್ಯಾಂಕ್; ಇಮೇಲ್ ನಲ್ಲಿ ಏನಿದೆ?

ನವದೆಹಲಿ: HDFC ಬ್ಯಾಂಕ್ ತನ್ನ ಗ್ರಾಹಕರಿಗೆ ನಕಲಿ ಕರೆಯ ಬಗ್ಗೆ ಎಚ್ಚರವಿರುವಂತೆ ಸಂದೇಶ ಕಳುಹಿಸಿದೆ. ನಕಲಿ ಕರೆಗೆ ಬಲಿ ಬೀಳದೆ ನಿಮ್ಮ ಕಾರ್ಡ್ ವಿವರಗಳನ್ನು ಸುರಕ್ಷಿತವಾಗಿಡಿ ಎಂದು ಸಂಸ್ಥೆ ಹೇಳಿದೆ.

ಗ್ರಾಹಕರಿಗೆ ಇಮೇಲ್ ಸಂದೇಶ ಕಳುಹಿಸಿರುವ HDFC ಹೊಸ ವಂಚನೆ ಜಾಲವೊಂದರ ಬಗ್ಗೆ ಗ್ರಾಹಕರನ್ನು ಎಚ್ಚರಿಸಿದೆ. ವಂಚಕರು ಗ್ರಾಹಕರಿಗೆ ನಕಲಿ IVR (ಇಂಟರ್ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಕರೆಗಳು ಸ್ವಯಂಚಾಲಿತ ದೂರವಾಣಿ ವ್ಯವಸ್ಥೆಗಳಾಗಿದ್ದು, ಅವು ಕರೆ ಮಾಡುವವರನ್ನು ರೆಕಾರ್ಡ್ ಮಾಡಿದ ಸಂದೇಶದೊಂದಿಗೆ ಸ್ವಾಗತಿಸಿ ಮೆನುಗಳಲ್ಲಿ ನ್ಯಾವಿಗೇಟ್ ಮಾಡಲು ಕೀಪ್ಯಾಡ್ ಅಥವಾ ಧ್ವನಿ ಆಜ್ಞೆಗಳನ್ನು ಬಳಸಲು ಪ್ರೇರೇಪಿಸುತ್ತವೆ) ಕರೆಗಳನ್ನು ಮಾಡುತ್ತಿರುವ ಬಗ್ಗೆ ಜಾಗೃತರಾಗಿರುವಂತೆ ಸೂಚಿಸಿದೆ.

"HDFC ಬ್ಯಾಂಕ್ ನಿಂದ ಕರೆ ಮಾಡಿದಂತೆ ನಕಲಿ ಕರೆ ಮಾಡಿ ಗ್ರಾಹಕರು ತಮ್ಮ ಕಾರ್ಡ್ ವಿವರಗಳನ್ನು ಹಂಚಿಕೊಳ್ಳುವಂತೆ ಮಾಡುತ್ತದೆ. ಅಥವಾ ಕರೆಯ ಸಂದರ್ಭದಲ್ಲಿ ಫೋನ್ ಬ್ಯಾಂಕಿಂಗ್ ಪಾಸ್ವರ್ಡ್ ಹಾಕುವಂತೆ ಮಾಡುತ್ತಿದ್ದಾರೆ" ಎಂದು ಸಂಸ್ಥೆ ಎಚ್ಚರಿಸಿದೆ.

ಇಂತಹ ಕರೆಗಳಿಗೆ ಪ್ರತಿಕ್ರಿಯೆ ತೋರಿಸಿದರೆ ಅನಧಿಕೃತ ವ್ಯವಹಾರಗಳು ನಡೆಯಬಹುದು, ಹಣ ಕಳೆದುಕೊಳ್ಳಬಹುದು ಅಥವಾ ನಿಮ್ಮ ಕಾರ್ಡ್ ಅನ್ನು ದುರುಪಯೋಗ ಮಾಡಿಕೊಳ್ಳಬಹುದು. ಈ ಕರೆಗಳು "ದೊಡ್ಡ ಹಣದ ವ್ಯವಹಾರ"ವನ್ನು ಉಲ್ಲೇಖಿಸುತ್ತವೆ ಮತ್ತು ನೀವು ಅದನ್ನು ದೃಢೀಕರಿಸುವುದು ಅಥವಾ ರದ್ದು ಮಾಡುವಂತೆ ಹೇಳುತ್ತವೆ. ಇಂತಹ ವಂಚನೆಯಿಂದ ಸ್ವತಃ ರಕ್ಷಿಸಿಕೊಳ್ಳಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ ಎಂದು ಬ್ಯಾಂಕ್ ಹೇಳಿದೆ:

► ಕರೆಯನ್ನು ಪರಿಶೀಲಿಸಿ: ಬಂದ ಕರೆ ಅಧಿಕೃತವೇ ಎಂದು ಪರಿಶೀಲಿಸಿ ದೃಢೀಕರಿಸಿ ಮತ್ತು ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ.

► ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ಪರೀಕ್ಷಿಸಿ: ಯಾವುದೇ ಅನಧಿಕೃತ ಚಟುವಟಿಕೆ ಆಗದಿರುವಂತೆ ನಿಯಮಿತವಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ವಿಶ್ಲೇಷಿಸಿ.

► ನಿಮ್ಮ ಫೋನ್ ಗೆ ಹೆಚ್ಚುವರಿ ಭದ್ರತೆ ಒದಗಿಸಲು ಎರಡು-ಹಂತದ ದೃಢೀಕರಣವನ್ನು ನೀಡಿ.

► ಧ್ವನಿಯ ಉಚ್ಛಾರ ಗಮನಿಸಿ: ವಿದೇಶಿ ಉಚ್ಛಾರಗಳನ್ನು ಗಮನಿಸಿ. ಅದು ವಂಚನೆಯ ಚಿಹ್ನೆಯಾಗಿರಬಹುದು.

► ಸಂಪರ್ಕವನ್ನು ನವೀಕರಿಸಿ: ಬ್ಯಾಂಕಿಂಗ್ ವ್ಯವಹಾರದ ಅಲರ್ಟ್ಗಳನ್ನು ಸ್ವೀಕರಿಸಲು ನಿಮ್ಮ ಮೊಬೈಲ್ ಸಂಖ್ಯೆ ನವೀಕರಿಸಿರುವುದನ್ನು ಖಚಿತಪಡಿಸಿ.

► ವಂಚನೆಯ ಪ್ರಯತ್ನಗಳನ್ನು ವರದಿ ಮಾಡಿ: ಶಂಕಿತ ನಕಲಿ ಕರೆ, ಎಸ್‌ಎಂಎಸ್ ಅಥವಾ ವಾಟ್ಸ್‌ಆಯಪ್ ಸಂದೇಶ ಬಂದರೆ ವರದಿ ಮಾಡಿ. ಸಂಚಾರ್ ಸಾಥಿ ಆಯಪ್ https://sancharsaathi.gov.in/ (Chakshu portal) ಮೂಲಕವೂ ವರದಿ ಮಾಡಬಹುದು. ಸಂತ್ರಸ್ತರಾಗಿದ್ದಲ್ಲಿ ತಕ್ಷಣವೇ ಬ್ಯಾಂಕ್ ಗೆ ಕರೆ ಮಾಡಿ ಅಥವಾ https://cybercrime.gov.in/ ಗೆ ವರದಿ ಮಾಡಿ ಅಥವಾ 1930 ಗೆ ಕರೆ ಮಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries