HEALTH TIPS

ದಾಳಿ ನಡೆಸಿದವರಿಗೆ ಶಿಕ್ಷಿಸದೇ ಬಿಡುವುದಿಲ್ಲ: ಇರಾನ್

ನವದೆಹಲಿ: 'ಯಾವುದೇ ರಕ್ಷಣಾ ವ್ಯವಸ್ಥೆಯನ್ನು ಹೊಂದಿರದ ತನ್ನ ಹಡಗನ್ನು ಅಮೆರಿಕ ಮುಳುಗಿಸಿದೆ. ತನ್ನ ನೌಕೆ ಮೇಲೆ ನಡೆದ ದಾಳಿಗೆ ತಕ್ಕ ಶಿಕ್ಷೆ ನೀಡದೇ ಬಿಡುವುದಿಲ್ಲ' ಎಂದು ಇರಾನ್‌ ಶುಕ್ರವಾರ ಹೇಳಿದೆ. 

'ಅಮೆರಿಕದ ದಾಳಿಯಿಂದಾಗಿ ಮುಳುಗಿರುವ ಇರಾನ್‌ನ ಐಆರ್‌ಐಎಸ್‌ ಡೆನಾ, ಯುದ್ಧ ಮಾಡುವ ಉದ್ದೇಶಕ್ಕೆ ನಿರ್ಮಿಸಿದ್ದ ಹಡಗು ಆಗಿರಲಿಲ್ಲ' ಎಂದು ಇರಾನ್‌ನ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಸಯೀದ್‌ ಖತಿಬ್‌ಜೆದೇಹ್ ಹೇಳಿದ್ದಾರೆ.

'ರೈಸಿನಾ ಸಂವಾದ'ದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅವರು ಭಾರತಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

'ಭಾರತ ಆಯೋಜಿಸಿದ್ದ ನೌಕಾಪಡೆಗಳ ತಾಲೀಮು 'ಮಿಲನ್‌'ನಲ್ಲಿ ಪಾಲ್ಗೊಂಡು ಮರಳುವ ವೇಳೆ ತನ್ನ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದೆ. ಅಮೆರಿಕದ ಈ ಕ್ರಮ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ' ಎಂದು ಸಯೀದ್‌ ಪ್ರತಿಪಾದಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ಭಾರತ ತಳೆದಿರುವ ನಿಲುವು ಕುರಿತ ಪ್ರಶ್ನೆಗೆ,'ಎರಡೂ ದೇಶಗಳನ್ನು ಇಂಡೊ-ಪರ್ಷಿಯನ್‌ ಸಂಸ್ಕೃತಿ ಬೆಸೆದಿದೆ. ಭಾರತದೊಂದಿಗಿನ ಸಂಬಂಧಕ್ಕೆ ನಾವು ಮಹತ್ವ ನೀಡುತ್ತೇವೆ' ಎಂದು ಸಯೀದ್‌ ಪ್ರತಿಕ್ರಿಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries