HEALTH TIPS

ರಾಜ್ಯಸಭೆ: ಒಬಿಸಿ ಮೀಸಲಾತಿ ದುರ್ಬಳಕೆ ಕುರಿತು ಬಿಜೆಪಿ ಸಂಸದನ ಹೇಳಿಕೆ ವಿರೋಧಿಸಿ ಪ್ರತಿಪಕ್ಷದ ಸಭಾತ್ಯಾಗ

ನವದೆಹಲಿ: ಧರ್ಮದ ಹೆಸರಿನಲ್ಲಿ ಒಬಿಸಿ ಮೀಸಲಾತಿಯ ದುರ್ಬಳಕೆಯಾಗುತ್ತಿದೆ ಎಂಬ ಬಿಜೆಪಿ ಸದಸ್ಯ ಕೆ. ಲಕ್ಷ್ಮಣ ಅವರ ಹೇಳಿಕೆಯನ್ನು ವಿರೋಧಿಸಿ ಸೋಮವಾರ ರಾಜ್ಯಸಭೆಯಲ್ಲಿ ಹಲವಾರು ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿದವು.

ಸಭಾತ್ಯಾಗವನ್ನು ಟೀಕಿಸಿದ ಸದನ ನಾಯಕ ಹಾಗೂ ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು, ಕಾಂಗ್ರೆಸ್ ನಾಯಕತ್ವ ಮತ್ತು ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಚರ್ಚೆಗಳಲ್ಲಿ ಆಸಕ್ತಿಯಿಲ್ಲ, ಪ್ರಜಾಸತ್ತಾತ್ಮಕ ಮೌಲ್ಯಗಳು ಅಥವಾ ಸಂವಿಧಾನದ ಬಗ್ಗೆ ಯಾವುದೇ ಗೌರವವಿಲ್ಲ ಎಂದು ಹೇಳಿದರು.

ಶೂನ್ಯವೇಳೆಯಲ್ಲಿ ಒಬಿಸಿ ಮೀಸಲಾತಿ ವಿಷಯವನ್ನು ಪ್ರಸ್ತಾಪಿಸಿದ ಲಕ್ಷ್ಮಣ, ಧರ್ಮದ ಹೆಸರಿನಲ್ಲಿ ಅವರ ಕೋಟಾ ದುರ್ಬಳಕೆಯಾಗುತ್ತಿದೆ ಎಂದು ಹೇಳಿದರು.

ಕೆಲವು ರಾಜ್ಯಗಳು ಮುಸ್ಲಿಮರಿಗೆ ಮೀಸಲಾತಿಗಳನ್ನು ಒದಗಿಸುತ್ತಿವೆ ಎಂದು ಅವರು ಹೇಳಿ, ಇಂತಹ ಧರ್ಮ-ಆಧಾರಿತ ಮೀಸಲಾತಿಗಳ ಸಮಗ್ರ ಪರಿಶೀಲನೆಗೆ ಆದೇಶಿಸುವಂತೆ ಸರಕಾರವನ್ನು ಕೋರಿದರು.

ಲಕ್ಷ್ಮಣ ಮಾತನಾಡುತ್ತಿದ್ದಾಗ ಕೆಲವು ಪ್ರತಿಪಕ್ಷ ಸದಸ್ಯರು ಅವರ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು.ಬಳಿಕ ಬಹುತೇಕ ಎಲ್ಲ ವಿರೋಧ ಪಕ್ಷಗಳು ಸಭಾತ್ಯಾಗ ನಡೆಸಿದವು.

ವಿರೋಧ ಪಕ್ಷಗಳು ಸಂವಿಧಾನಕ್ಕೆ ಅಗೌರವ ತೋರಿಸುತ್ತಿವೆ ಮತ್ತು ಸಂಸದೀಯ ಕಾರ್ಯವಿಧಾನಗಳನ್ನು ಗೌರವಿಸುವುದಿಲ್ಲ ಎಂದು ಹೇಳಿದ ನಡ್ಡಾ, ವಿರೋಧ ಪಕ್ಷಗಳು ಮುಸ್ಲಿಮರನ್ನು ಮತ ಬ್ಯಾಂಕ್ ಎಂದು ಪರಿಗಣಿಸಿ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿವೆ ಎಂದು ಆರೋಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries