ನವದೆಹಲಿ: ಅಮೆರಿಕದ ದಾಳಿಯಲ್ಲಿ ಮಶಾದ್ ವಿಮಾನ ನಿಲ್ದಾಣದಲ್ಲಿದ್ದ 'ಮಹಾನ್ ಏರ್' ವಿಮಾನಕ್ಕೆ ಹಾನಿಯಾಗಿದೆ. ಇದು ಮಾನವೀಯ ನೆರವು ಹಾಗೂ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಭಾರತಕ್ಕೆ ತೆರಳಬೇಕಿತ್ತು ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ.
ಇರಾನ್ ಯುದ್ಧಪೀಡಿತರಿಗಾಗಿ ಭಾರತದಿಂದ ಅಗತ್ಯ ವೈದ್ಯಕೀಯ ಸರಬರಾಜು ಮತ್ತು ನೆರವು ಒದಗಿಸುವ ಸಲುವಾಗಿ 'ಮಹಾನ್ ಏರ್' ವಿಮಾನವು ಏ.1ರಂದು ನವದೆಹಲಿಗೆ ಬರಬೇಕಿತ್ತು ಎಂದು ತಿಳಿಸಿದ್ದಾರೆ.
ಭಾರತವು ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿ ಸಹಯೋಗದೊಂದಿಗೆ ಮಾರ್ಚ್ 18ರಂದು ವೈದ್ಯಕೀಯ ಸಾಮಗ್ರಿಗಳನ್ನು ರವಾನಿಸಿತ್ತು. ಇದರ ನಂತರ ಇರಾನ್ ರಾಯಭಾರ ಕಚೇರಿಯು ಭಾರತೀಯರಿಗೆ ಧನ್ಯವಾದ ತಿಳಿಸಿತ್ತು.
'ಮಹಾನ್ ಏರ್' ವಿಮಾನವು ಇರಾನ್‌ನ ಖಾಸಗಿ ವಿಮಾನ ಸಂಸ್ಥೆಯಾಗಿದ್ದು, ಏಷ್ಯಾದ ಹಲವಾರು ದೇಶಗಳಲ್ಲಿ ವಿಮಾನಗಳನ್ನು ನಿರ್ವಹಿಸುತ್ತದೆ.
ಆದರೆ, ಘಟನೆಯ ಕುರಿತು ಅಮೆರಿಕದ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

