ಬದಿಯಡ್ಕ: ಗಾನಪ್ರವೀಣ ವಿದ್ವಾನ್ ಶ್ರೀ ಯೋಗೀಶ ಶರ್ಮ ಬಳ್ಳಪದವು ಅವರ ನಿರ್ದೇಶಕತ್ವದ "ವೀಣಾವಾದಿನಿ ಸಂಗೀತ ವಿದ್ಯಾಪೀಠಂ" ನಲ್ಲಿ ಅ. 21 ರ ವಿಜಯದಶಮಿಯಂದು ಕರ್ನಾಟಕ ಶಾಸ್ತ್ರೀಯ ಸಂಗೀತ, ವಯೋಲಿನ್ (ಪಿಟೀಲು) ಹಾಗೂ ಮೃದಂಗ ತರಗತಿಗಳು ಆರಂಭವಾಗಲಿದೆ. ಜೂನಿಯರ್, ಸೀನಿಯರ್, ಹಾಗೂ ವಿದ್ವತ್ ಹಂತದ ಎಲ್ಲಾ ತರಗತಿಗಳು ಆನ್ ಲೈನ್ ಹಾಗೂ ಆಫ್ಲೈನ್ ನಲ್ಲಿ ನಡೆಸಿಕೊಡಲಾಗುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಹಾಗೂ ಮೃದಂಗ ತರಗತಿಗಳನ್ನು ಗುರುಗಳಾದ ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ನಡೆಸಿಕೊಡಲಿದ್ದಾರೆ. ವಯೋಲಿನ್ ತರಗತಿಗಳನ್ನು ಗುರುಗಳಾದ ವಿದ್ವಾನ್ ಪ್ರಭಾಕರ ಕುಂಜಾರು ಹಾಗೂ ವಿದ್ವಾನ್ ಜಗದೀಶ ಕೊರೆಕ್ಕಾನ ಅವರು ನಡೆಸಿಕೊಡಲಿದ್ದಾರೆ.
ಆಫ್ ಲೈನ್ ಸಂಗೀತ ಹಾಗೂ ಮೃದಂಗ ತರಗತಿಗಳು ಮಂಗಳೂರು ಹಾಗೂ ಪುಳಿತ್ತಡಿ ಬಳಿಯ "ನಾರಾಯಣೀಯಂ" ನಲ್ಲಿ ನಡೆಯುತ್ತವೆ. ಆಸಕ್ತರು ಪೋನ್ +91 6238144707 ನ್ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

.png)
