ಕುಂಬಳೆ: ಅನಂತಪುರ ಕೈಗಾರಿಕಾ ಪ್ರಾಂಗಣದಲ್ಲಿರುವ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ದುರಂತದಲ್ಲಿ ಒಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಒಡಿಶಾ ನಿವಾಸಿ ಮಹೇಶ್ವರ್(19)ಮೃತಪಟ್ಟವರು. ಗಂಭೀರ ಗಾಯಗೊಮಡಿರುವ ಸಹಕಾರ್ಮಿಕರಾದ ತನುಜ್(24)ಅವರನ್ನು ಮಂಗಳೂರು ಹಾಗೂ ಸಿದ್ಧಾನಂದ(21)ಎಂಬವರನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಂತಪುರ ಕೈಗಾರಿಕಾ ವಲಯದಲ್ಲಿರುವ 'ಆಕ್ಸಿಜನ್ ಪೆÇ್ರಮ್ಯಾಕ್ಸ್' ಕಾರ್ಖಾನೆಯಲ್ಲಿ ಭಾನುವಾರ ದುರಂತ ಸಂಭವಿಸಿದೆ. ಕಾರ್ಖಾನೆಯ ಬಾಯ್ಲರ್‍ನಿಂದ ಅತ್ಯಂತ ಶಕ್ತಿಯುತವಾಗಿ ಅನಿಲ ಸೋರಿಕೆಯುಂಟಾದ ರಭಸಕ್ಕೆ ಸ್ಥಳದಲ್ಲಿದ್ದ ಕಾರ್ಮಿಕ ಮಹೇಶ್ವರ್ ಸನಿಹದ ಕೋಳಿ ತ್ಯಾಜ್ಯದ ಹೊಂಡಕ್ಕೆ ಬಿದ್ದಿದ್ದಾರೆ. ಈತನನ್ನು ರಕ್ಷಿಸಲು ಯತ್ನಿಸುವ ಮಧ್ಯೆ, ಇತರ ಇಬ್ಬರೂ ಹೊಮಡಕ್ಕೆ ಬಿದ್ದಿದ್ದಾರೆ. ಇತರ ಕಾರ್ಮಿಕರು ಮೂರೂ ಮಂದಿಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ, ಮಹೇಶ್ವರ್ ಪ್ರಾಣವುಳಿಸಲಾಗಿಲ್ಲ. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


-MAHESHWARA.jpeg)
