ಗ್ಯಾಂ
ಗ್ಯಾಂ
ಗ್ಯಾಂ
ಗ್ಯಾಂ
ಗ್ಯಾಂಗ್ಟಕ್: ಉತ್ತರ ಸಿಕ್ಕಿಂನಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, 135 ಪ್ರವಾಸಿಗರನ್ನು ಭಾರತೀಯ ಸೇನೆಯು ರಕ್ಷಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಭಾರಿ ಹಿಮಪಾತದ ನಡುವೆ ಪೂರ್ವ ಕಮಾಂಡ್‌ನ ತ್ರಿಶಕ್ತಿ ಕಾರ್ಪ್ಸ್ 'ಆಪರೇಷನ್ ಹಿಮ ಸೇತು' ಹೆಸರಿನ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ.
ಕಡಿದಾದ ಪ್ರದೇಶಗಳಲ್ಲಿ ನಾಗರಿಕರಿಗೆ ಸೇನೆಯು ನೆರವಾಗುತ್ತಿದೆ. ತುರ್ತು ವೈದ್ಯಕೀಯ ಸೇವೆಗೆ ಆದ್ಯತೆ ನೀಡಲಾಗುತ್ತಿದೆ.
ಸೇನೆಯೊಂದಿಗೆ ಗಡಿ ರಸ್ತೆ ಸಂಘಟನೆ (ಬಿಆರ್‌ಒ) ನಿರಂತರ ಸಮನ್ವಯ ಸಾಧಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ರಸ್ತೆ ಸಂಪರ್ಕ ಮರುಸ್ಥಾಪಿಸಲು ಯತ್ನ ಮುಂದುವರಿದಿದೆ.
ಭಾರತ-ಚೀನಾ ಗಡಿಗೆ ಸಮೀಪದ ಲಾಚೆನ್ ಹಾಗೂ ಚುಂಗ್‌ಥಾಂಗ್ ಪ್ರದೇಶಗಳಲ್ಲಿ ಭೂಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿದುಕೊಂಡಿದೆ.

