HEALTH TIPS

ನಾಳೆಯಿಂದ ಏ.16ರ ತನಕ ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನ ಮಂದಿರದಲ್ಲಿ ಶ್ರೀಮದ್ ಭಾಗವತ ಸಪ್ತಾಹ

ಬದಿಯಡ್ಕ: ನಾರಂಪಾಡಿ ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನ ಮಂದಿರದಲ್ಲಿ ಶ್ರೀಮದ್ ಭಾಗವತ ಸಪ್ತಾಹ ಏಪ್ರಿಲ್ ನಾಳೆಯಿಂದ ಏಪ್ರಿಲ್ 16ರ ತನಕ ಜರಗಲಿರುವುದು.  ಗುರುವಾರ ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ, ಭಜನೆ, ಶ್ರೀಮದ್ಭಾಗವತ ಸಪ್ತಾಹದ ಬಾಬ್ತು ಸಾಮೂಹಿಕ ಪ್ರಾರ್ಥನೆ, ಬೆಳಗ್ಗೆ 9.30ಕ್ಕೆ ಉಗ್ರಾಣ ಮುಹೂರ್ತ ಬ್ರಹ್ಮಶ್ರೀ ಶಂಕರನಾರಾಯಣ ಶರ್ಮ ಗೋಸಾಡ ಇವರಿಂದ, 10 ಗಂಟೆಗೆ ಸ್ವಯಂಸೇವಕರಿಗೆ ಬಾಡ್ಜ್ ವಿತರಣೆ, ಸಂಜೀವಶೆಟ್ಟಿ ಮೊಟ್ಟೆಕುಂಜ ಇವರಿಂದ, ಅಪರಾಹ್ನ ಹಸಿರುವಾಣಿ ಶೋಭಾಯಾತ್ರೆ, ಸಂಜೆ 4 ಗಂಟೆಗೆ ಸಾಮೂಹಿಕ ಪ್ರಾರ್ಥನೆ, 5 ಗಂಟೆಗೆ ಭಾಗವತಾಚಾರ್ಯ ಬ್ರಹ್ಮಶ್ರೀ ಶಂಕರನ್ ನಂಬೂದಿರಿ ಚೇದಮಂಗಲಂ ಪಯ್ಯನ್ನೂರು ಇವರ ಆಗಮನ, ಪೂರ್ಣಕುಂಭ ಸ್ವಾಗತ, ದೀಪ ಪ್ರತಿಷ್ಠೆ, ಆಚಾರ್ಯವರಣ, ಸಂಜೆ 6.30ರಿಂದ ಭಾಗವತಾಚಾರ್ಯರಿಂದ ಮಹಾತ್ಮೆ ಪ್ರವಚನ ನಡೆಯಲಿದೆ. 


ಏ.10ರಿಂದ ಏ.16ರ ತನಕ ಪ್ರಾತಃಕಾಲ 5 ಗಂಟೆಗೆ ಗಣಪತಿ ಹೋಮ, 6.30ರಿಂದ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀಮದ್ ಭಾಗವತ ಪಾರಾಯಣ, ಪ್ರವಚನ, 7.30ಕ್ಕೆ ಮಹಾಪೂಜೆ, 8 ಗಂಟೆಗೆ ಬೆಳಗ್ಗಿನ ಉಪಾಹಾರ, 9.15ರಿಂದ 12.45ರ ತನಕ ಪಾರಾಯಣ, ಪ್ರವಚನ ಮುಂದುವರಿಕೆ, ಮಧ್ಯಾಹ್ನ 1 ಗಂಟೆಗೆ ಶ್ರೀ ಧರ್ಮಶಾಸ್ತಾ ದೇವರ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಭೋಜನಪ್ರಸಾದ, ಅಪರಾಹ್ನ 3.15ರಿಂದ 4.30ರ ತನಕ ಪಾರಾಯಣ, ಪ್ರವಚನ ಮುಂದುವರಿಕೆ, ಸಂಜೆ 5 ರಿಂದ 6ರ ತನಕ ಪಾರಾಯಣ, ಪ್ರವಚನ ಮುಂದುವರಿಯುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries