HEALTH TIPS

ಪಶ್ಚಿಮ ಏಷ್ಯಾ ಸಂಘರ್ಷ: ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಪ್ರಮಾಣ ಶೇ 20 ಇಳಿಕೆ

 ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದ ಬಳಿಕ ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಶೇ 15ರಿಂದ ಶೇ 20ರಷ್ಟು ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ದೇಶದ ವಿಮಾನಯಾನ ಉದ್ಯಮವು ಅಂದಾಜು ₹18 ಸಾವಿರ ಕೋಟಿ ನಷ್ಟ ಅನುಭವಿಸುವ ಭೀತಿಯಲ್ಲಿದೆ ಎಂದು ವರದಿಯೊಂದು ಗುರುವಾರ ತಿಳಿಸಿದೆ.


ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಭಾರತದ ವಿಮಾನಯಾನ ಮತ್ತು ರೆಸ್ಟೊರೆಂಟ್ ಉದ್ಯಮಗಳು ತೀವ್ರ ನಷ್ಟವನ್ನು ಅನುಭವಿಸುತ್ತಿದ್ದು, ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಕುಸಿದಿದೆ.ಪ್ರಮುಖ ಮುಖ್ಯಾಂಶಗಳು• ವಿಮಾನಯಾನ ಕ್ಷೇತ್ರಕ್ಕೆ ಭಾರಿ ನಷ್ಟಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ವಿಮಾನ ಹಾರಾಟದ ಮಾರ್ಗ ಬದಲಾವಣೆ ಮತ್ತು ಇಂಧನ ವೆಚ್ಚ ಹೆಚ್ಚಳದಿಂದಾಗಿ ವಾಯುಯಾನ ಉದ್ಯಮವು ಅಂದಾಜು 18 ಸಾವಿರ ಕೋಟಿ ನಷ್ಟದ ಭೀತಿಯಲ್ಲಿದೆ.• ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಜಾಗತಿಕ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ವಿದೇಶಿ ಪ್ರವಾಸಿಗರು ಭಾರತ ಪ್ರವಾಸದ ವಿಚಾರದಲ್ಲಿ ಎಚ್ಚರಿಕೆಯ ನಿಲುವು ತಳೆದಿರುವುದರಿಂದ, ಪ್ರವಾಸಿಗರ ಒಳಹರಿವು ಶೇ 15ರಿಂದ 20ರಷ್ಟು ಕಡಿಮೆಯಾಗಿದೆ.• ರೆಸ್ಟೊರೆಂಟ್ ಗಳ ಮೇಲೆ ಪರಿಣಾಮಆಮದು ಸರಕುಗಳು ಹಾಗೂ ಸಾರಿಗೆ ವೆಚ್ಚ ಏರಿಕೆಯಿಂದ ಆಹಾರ ಸೇವಾ ವಲಯದಲ್ಲಿ ದರ ಶೇ 10ರಿಂದ 15ರಷ್ಟು ಹೆಚ್ಚಾಗಿದೆ, ಜೊತೆಗೆ ಶೇ 10ರಷ್ಟು ರೆಸ್ಟೊರೆಂಟ್‌ಗಳು ತಾತ್ಕಾಲಿಕವಾಗಿ ಮುಚ್ಚಿವೆ.• ಉದ್ಯೋಗ ಕಡಿತದ ಆತಂಕಸಂಘರ್ಷ ದೀರ್ಘಕಾಲ ಮುಂದುವರಿದರೆ ದೇಶದ ರೆಸ್ಟೊರೆಂಟ್ ಉದ್ಯಮದಲ್ಲಿ ಸುಮಾರು 5ರಿಂದ 7 ಲಕ್ಷ ಮಂದಿ ತಮ್ಮ ಉದ್ಯೋಗ ಕಳೆದುಕೊಳ್ಳುವ ಅಪಾಯವಿದೆ.• ಕಾರ್ಯಾಚರಣೆ ವೆಚ್ಚದಲ್ಲಿ ಏರಿಕೆವಿಮಾನಗಳ ಹಾರಾಟದ ಅವಧಿ 2ರಿಂದ 4 ಗಂಟೆ ಹೆಚ್ಚಳವಾಗಿರುವುದರಿಂದ ಮತ್ತು ಇಂಧನ ವೆಚ್ಚ ದುಬಾರಿಯಾಗಿರುವುದರಿಂದ ಟಿಕೆಟ್ ದರಗಳ ಏರಿಕೆಯಾಗಿದ್ದು ಗ್ರಾಹಕರ ಮೇಲೆ ಹೊರೆಯಾಗಿದೆ.ಪ್ರಮುಖ ಅಂಕಿಅಂಶಗಳುಶೇ 15ರಿಂದ ಶೇ 20ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ₹18 ಸಾವಿರ ಕೋಟಿವಿಮಾನಯಾನ ಉದ್ಯಮದ ಸಂಭವನೀಯ ನಷ್ಟ5ರಿಂದ 7 ಲಕ್ಷರೆಸ್ಟೊರೆಂಟ್ ಉದ್ಯೋಗಿಗಳಲ್ಲಿ ಕಡಿತದ ಆತಂಕ₹7.76 ಲಕ್ಷ ಕೋಟಿಆಹಾರ ಸೇವೆ ಮಾರುಕಟ್ಟೆ ಅಂದಾಜು 2028ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಸಂಘರ್ಷದಿಂದ ವಿಮಾನಯಾನ ಉದ್ಯಮವು ಹೆಚ್ಚು ತೊಂದರೆಗೆ ಒಳಗಾಗಿದೆ. ವಿಮಾನಗಳ ಹಾರಾಟ ರದ್ದತಿ, ವಾಯು ಪ್ರದೇಶದ ಬಳಕೆ ಮೇಲಿನ ನಿರ್ಬಂಧಗಳು, ಅಂತರ ರಾಷ್ಟ್ರೀಯ ವಿಮಾನಗಳ ಮಾರ್ಗಗಳಲ್ಲಿ ಬದಲಾವಣೆಯಂತಹ ಸಮಸ್ಯೆಗಳು ಸೃಷ್ಟಿ ಆಗಿವೆ ಎಂದು ವರದಿ ತಿಳಿಸಿದೆ.

ಅಡಚಣೆಯ ಕಾರಣದಿಂದ ವಿಮಾನಗಳ ಹಾರಾಟದ ಅವಧಿ ಪ್ರಮುಖ ಮಾರ್ಗಗಳಲ್ಲಿ 2ರಿಂದ 4 ಗಂಟೆಯಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮ ವಿಮಾನಗಳ ಇಂಧನ ಬಳಕೆ ಮತ್ತು ಕಾರ್ಯಾಚರಣೆ ವೆಚ್ಚ ತೀವ್ರ ಹೆಚ್ಚಳವಾಗಿದೆ.

ವಿಮಾನಗಳ ಕಾರ್ಯಾಚರಣೆ ವೆಚ್ಚದಲ್ಲಿ ಇಂಧನದ ಪಾಲು ಶೇ 35ರಿಂದ ಶೇ 40ರಷ್ಟಿದೆ. ಈಗ ಉಂಟಾಗಿರುವ ಸಂಘರ್ಷದ ಸನ್ನಿವೇಶವು ಉದ್ಯಮದ ಲಾಭ ಪ್ರಮಾಣವನ್ನು ಕಡಿಮೆ ಮಾಡಿದೆ. ಸಂಘರ್ಷದಿಂದ ವಿಮಾನಗಳ ಹಾರಾಟ ಕಡಿಮೆ ಆಗಿದ್ದಲ್ಲದೆ, ಟಿಕೆಟ್ ದರ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಟಿಕೆಟ್‌ಗಳ ಬುಕಿಂಗ್‌ ವಿಧಾನ, ಟಿಕೆಟ್‌ ರದ್ದತಿ ಮತ್ತು ಕಾರ್ಯಾಚರಣೆ ವೆಚ್ಚದ ಹೆಚ್ಚಳದ ಕುರಿತು ಸಂಬಂಧಪಟ್ಟ ಪಾಲುದಾರರಿಂದ ಪ್ರತಿಕ್ರಿಯೆ ಪಡೆದು ರೇಟಿಂಗ್‌ ಏಜೆನ್ಸಿ ಐಸಿಆರ್‌ಎ, ವಿಮಾನಯಾನ ಉದ್ಯಮವು ಒಟ್ಟಾರೆ ₹18 ಸಾವಿರ ಕೋಟಿಯಷ್ಟು ನಿವ್ವಳ ನಷ್ಟ ಕಾಣಬಹುದು ಎಂದು ಹೇಳಿದೆ ಎಂದು ವಾಣಿಜ್ಯೋದ್ಯಮಗಳ ಸಂಘಟನೆಯಾದ ಪಿಎಚ್‌ಡಿಸಿಸಿಐ ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ವಿದೇಶಿ ಪ್ರವಾಸಿಗರು ಎಚ್ಚರಿಕೆಯ ನಡೆ ಅನುಸರಿಸುತ್ತಿದ್ದಾರೆ.ಇದರಿಂದ ದೇಶಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 15ರಿಂದ ಶೇ 20ರಷ್ಟು ಇಳಿಕೆ ಆಗಿದೆ.

ಸರಕುಗಳ ದರ ಏರಿಕೆ: ಸಂಘರ್ಷದಿಂದ ರೆಸ್ಟೊರೆಂಟ್‌ ಮತ್ತು ಆಹಾರ ಸೇವಾ ವಲಯವು ಕೂಡ ಮಿಶ್ರ ಪರಿಣಾಮವನ್ನು ಕಾಣುತ್ತಿದೆ. ಭಾರತದ ರಾಷ್ಟ್ರೀಯ ರೆಸ್ಟೊರೆಂಟ್‌ ಸಂಘದ (ಎನ್‌ಆರ್‌ಎಐ) ಪ್ರಕಾರ, ಆಮದು ಮಾಡಿಕೊಂಡ ಸರಕುಗಳು, ಸಾರಿಗೆ ಮತ್ತು ಇಂಧನದ ಬೆಲೆಯಲ್ಲಿನ ಹೆಚ್ಚಳದಿಂದ ಸರಕುಗಳ ದರ ಶೇ 10ರಿಂದ ಶೇ 15ರವರೆಗೆ ಏರಿಕೆಯಾಗಿದೆ.

'ಎಲ್‌ಪಿಜಿ ಪೂರೈಕೆಯಲ್ಲಿನ ಅಡಚಣೆಯು ರೆಸ್ಟೊರೆಂಟ್‌ ಉದ್ಯಮದ ಕಾರ್ಯಾಚರಣೆಗೆ ಹೆಚ್ಚಿನ ಅಡ್ಡಿ ಉಂಟು ಮಾಡಿದೆ. ಸರಿಸುಮಾರು ಶೇ 10ರಷ್ಟು ರೆಸ್ಟೊರೆಂಟ್‌ಗಳು ತಾತ್ಕಾಲಿಕವಾಗಿ ಮುಚ್ಚಿವೆ. ಶೇ 60ರಿಂದ ಶೇ 70ರಷ್ಟು ರೆಸ್ಟೊರೆಂಟ್‌ಗಳು ಇಂಡಕ್ಷನ್‌ ಒಲೆ, ಪರ್ಯಾಯ ಇಂಧನ ಬಳಕೆ ಮಾಡಲು ಮುಂದಾಗಿವೆ. ಆಹಾರದ ಪಟ್ಟಿಯಲ್ಲಿ ಬದಲಾವಣೆ ಆಗಿದೆ ಅಥವಾ ಉದ್ಯಮದ ಕಾರ್ಯಾಚರಣೆ ಅವಧಿ ಕಡಿಮೆ ಆಗಿದೆ' ಎಂದು ಎನ್‌ಆರ್‌ಎಐನ ಅಧ್ಯಕ್ಷ ಸಾಗರ್ ದರ್ಯಾನಿ ಹೇಳಿದ್ದಾರೆ.

2024ರಲ್ಲಿ ದೇಶದ ಆಹಾರ ಸೇವೆಗಳ ಮಾರುಕಟ್ಟೆ ಮೌಲ್ಯ ₹5.69 ಲಕ್ಷ ಕೋಟಿಯಷ್ಟಾಗಿತ್ತು. ಇದು 2028ರ ವೇಳೆಗೆ ₹7.76 ಲಕ್ಷ ಕೋಟಿಯಾಗುವ ಅಂದಾಜಿದೆ. 2026ರಲ್ಲಿ ₹6.46 ಲಕ್ಷ ಕೋಟಿಯಷ್ಟಾಗಲಿದ್ದು, ದಿನವೊಂದಕ್ಕೆ ಉದ್ಯಮದ ವಹಿವಾಟು ಅಂದಾಜು ₹17,700 ಕೋಟಿ ಆಗಲಿದೆ ಎಂದು ಉದ್ಯಮವು ಅಂದಾಜಿಸಿದೆ.

ಉದ್ಯಮದ ವಹಿವಾಟು ಶೇ 15ರಿಂದ ಶೇ 20ರಷ್ಟು ಇಳಿಕೆ ಆಗುವುದರಿಂದ ದಿನವೊಂದಕ್ಕೆ ಅಂದಾಜು ₹2,650 ಕೋಟಿ ನಷ್ಟ ಉಂಟಾಗಬಹುದು. ಇದು ತಿಂಗಳಿಗೆ ₹79 ಸಾವಿರ ಕೋಟಿಯಷ್ಟಾಗಲಿದ್ದು,ಆರ್ಥಿಕತೆಗೆ ತೊಂದರೆ ಉಂಟು ಮಾಡಲಿದೆ ಎಂದು ಹೇಳಿದೆ.

ಸಂಘರ್ಷವು ರೆಸ್ಟೊರೆಂಟ್ ಉದ್ಯಮದ ಉದ್ಯೋಗದ ಮೇಲೂ ಪರಿಣಾಮ ಬೀರುವ ಆತಂಕ ಸೃಷ್ಟಿಯಾಗಿದೆ. ಪ್ರಸ್ತುತ ರೆಸ್ಟೊರೆಂಟ್ ಉದ್ಯಮವು 85 ಲಕ್ಷಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದೆ. ಸಂಘರ್ಷವು ದೀರ್ಘಾವಧಿಗೆ ಮುಂದುವರಿದರೆ 5ರಿಂದ 7 ಲಕ್ಷ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದರ ಜೊತೆಗೆ ಹೊಸ ನೇಮಕಾತಿಯು ಸ್ಥಗಿತಗೊಳ್ಳಲಿದೆ ಮತ್ತು ರೆಸ್ಟೊರೆಂಟ್‌ಗಳ ವಿಸ್ತರಣೆ ಆಲೋಚನೆಯು ವಿಳಂಬ ಆಗಲಿದೆ ಎಂದು ವರದಿ ತಿಳಿಸಿದೆ. 7 ಲಕ್ಷ ಉದ್ಯೋಗ ಕಡಿತ ಸಾಧ್ಯತೆ 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries