HEALTH TIPS

ವರ್ಷದಲ್ಲಿ 1748 ಯುನಿಟ್ ರಕ್ತದ ಪೂರೈಕೆ ಮಾಡಿದ ಹೆಗ್ಗಳಿಕೆ: ಕಾಸರಗೋಡು ಸೇವಾ ಭಾರತಿ ಜೀವನಿಧಿಗೆ ಮೊದಲ ಸ್ಥಾನ

ಕಾಸರಗೋಡು: ರಕ್ತದಾನಿಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಅಧಿಕ ದಾನಿಗಳಿಂದ ರಕ್ತದಾನವನ್ನು ಮಾಡಿಸುವಲ್ಲಿ ಮುತುವರ್ಜಿ ವಹಿಸಿದ ಕಾಸರಗೋಡು ಸೇವಾ ಭಾರತಿ ಜೀವನಿಧಿಗೆ ಕಾಸರಗೋಡು ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಪ್ರಶಸ್ತಿ ಲಭಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ 2025 ಅಕ್ಟೋಬರ್ ಒಂದರಿಂದ 2026 ಸೆಪ್ಟಂಬರ್ 31ರ ಒಂದು ವರ್ಷದ ಅವಧಿಯಲ್ಲಿ ಸೇವಾ ಭಾರತಿ ಜೀವನಿಧಿ ಕಾಸರಗೋಡು ವತಿಯಿಂದ 1044 ಯುನಿಟ್ ರಕ್ತದ ಪೂರೈಕೆ ಮಾಡಲಾಗಿದೆ. ಇದನ್ನು ಮನಗಂಡು ಕಾಸರಗೋಡು ಜಿಲ್ಲಾ ಆಸ್ಪತ್ರೆಯ ರಕ್ತ ಬ್ಯಾಂಕ್‍ನಲ್ಲಿ ಸೇವಾ ಭಾರತಿ ಜೀವನಿಧಿ ಕಾಸರಗೋಡು ಒಂದನೇ ಸ್ಥಾನ ಪಡೆದಿದೆ. ಈ ಒಂದು ವರ್ಷದಲ್ಲಿ ಕೇರಳ ರಾಜ್ಯದಲ್ಲಿ ಅತೀ ಹೆಚ್ಚು ರಕ್ತ ಸಂಗ್ರಹ ಮಾಡಿದ ಪ್ರಶಸ್ತಿ ಕಾಸರಗೋಡು ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್‍ಗೆ ದೊರಕಿದೆ (6000+ಯುನಿಟ್). ಹಾಗೂ ಸೇವಾ ಭಾರತಿ ಜೀವ ನಿಧಿ ಕಾಸರಗೋಡಿಗೆ ಅಧಿಕ ರಕ್ತದಾನಿಗಳನ್ನು ಕಳುಹಿಸಿ ರಕ್ತದಾನ ಮಾಡಿಸಿದ್ದಕ್ಕೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. ಸೇವಾ ಭಾರತಿ ಜೀವನಿಧಿ ಕಾಸರಗೋಡು ಈ ಒಂದು ವರ್ಷದಲ್ಲಿ ಕಾಸರಗೋಡು ಹಾಗೂ ಮಂಗಳೂರು ಸೇರಿದಂತೆ ಬಂದ ಬೇಡಿಕೆಗೆ ತಕ್ಕಂತೆ 1748 ಯುನಿಟ್ ರಕ್ತದ ಪೂರೈಕೆ ಮಾಡಿದೆ. ರಕ್ತನಿಧಿಯ ಸಂಚಾಲಕ ದಯಾನಂದ ಭಟ್, ಗಣೇಶ್ ಪ್ರಸಾದ್ ಮೀಪುಗುರಿ ಪ್ರಶಸ್ತಿಯನ್ನು ಪಡೆದುಕೊಂಡರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries