ಸಮರಸ ಚಿತ್ರಸುದ್ದಿ: ಕಾಸರಗೋಡು: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಕಾಸರಗೋಡು ಬ್ಲಾಕ್ ಸಮಿತಿಯ ವತಿಯಿಂದ ಹಿರಿಯರ ದಿನಾಚರಣೆ ಅಂಗವಾಗಿ ಶತಾಯುಷಿ ಮೃದಂಗ ವಿದ್ವಾನ್ ಕಾಸರಗೋಡು ಸೂರ್ಲು ಬಾಬು ರೈ ಅವರಿಗೆ, ಅವರ ನಿವಾಸದಲ್ಲಿ ಗೌರವಾರ್ಪಣೆ ಸಲ್ಲಿಸಲಾಯಿತು. ಸಂಘಟನೆ ಬ್ಲಾಕ್ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಭಟ್ ಕಾರ್ಯದರ್ಶಿ ರಾಜೇಂದ್ರ ಕುಂಟಾರು, ಸವಿತಾ ಟೀಚರ್, ಬಲರಾಮ್ ಭಟ್, ನೂತನ ಕುಮಾರಿ ಹಾಗೂ ನಾರಾಯಣ ಉಪಸ್ಥಿತರಿದ್ದರು.


