ಇಂಫಾಲ್: ಮಣಿಪುರದ ಕಾಮ್ಜಾಂಗ್ ಪ್ರದೇಶದಲ್ಲಿ ಮಂಗಳವಾರ ನಸುಕಿನಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 5.59ಕ್ಕೆ ಕಂಪನ ಸಂಭವಿಸಿದ್ದು, ಇದರ ಕೇಂದ್ರಬಿಂದು ಕಾಮ್ಜಾಂಗ್ನಲ್ಲಿ ಇತ್ತು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ (ಎನ್ಸಿಎಸ್) ಸ್ಪಷ್ಟಪಡಿಸಿದೆ.
ಭೂಮಿಯ ಮೇಲ್ಮೈಯಿಂದ 62 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಇದನ್ನು ಮಧ್ಯಮ ಆಳದ ಭೂಕಂಪ ಘಟನೆ ಎಂದು ವಿಶ್ಲೇಷಿಸಲಾಗಿದೆ. ತಕ್ಷಣಕ್ಕೆ ಯಾವುದೇ ದೊಡ್ಡ ಹಾನಿ ಅಥವಾ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.

