HEALTH TIPS

AI ಮೇಲೆ ಅವಲಂಬಿತರಾಗಿದ್ದವರಿಗೆ ಓಪನ್‌ಎಐ ಶಾಕ್, ವಿಡಿಯೋ ಜನರೇಟರ್ ಸೊರಾ ಸ್ಥಗಿತ

AI ಮೇಲೆ ಅವಲಂಬಿತರಾಗಿದ್ದವರಿಗೆ ಓಪನ್‌ಎಐ ಶಾಕ್, ವಿಡಿಯೋ ಜನರೇಟರ್ ಸೊರಾ ಸ್ಥಗಿತ, ಚಾಟ್‌ಜಿಪಿಟಿ ಮೂಲಕ ಕ್ರಾಂತಿ ಮಾಡಿರುವ ಓಪನ್‌ಎಐ ಇದೀಗ ಸೊರಾ ಸೇವೆ ನಿಲ್ಲಿಸಿದೆ. ಚಾಟ‌ಜಿಪಪಿಟಿ ವಿಡಿಯೋ ಫೀಚರ್ಸ್ ಕೂಡ ಲಭ್ಯವಿಲ್ಲ. ವಿಶ್ವದಲ್ಲಿ ಇದೀಗ ಎಐ ಕ್ರಾಂತಿಯಾಗಿದೆ.

ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಎಐ ಸೇವೆಗಳನ್ನು ಬಳಸುತ್ತಿದ್ದಾರೆ. ಕಚೇರಿ ಸೇರಿದತೆ ಎಲ್ಲಾ ಕ್ಷೇತ್ರದಲ್ಲಿ ಎಐ ಬಳಕೆಯಾಗುತ್ತಿದೆ. ಪರಿಣಾಮ ಹಲವರು ಕೆಲಸಕ್ಕೆ ಕುತ್ತು ಬರುತ್ತಿದೆ. ಎಐ ಆಗಮನದ ಬಳಿಕ ಬಹುತೇಕರು ಎಐ ಮೇಲೆ ಅವಲಂಬಿತರಾಗಿದ್ದಾರೆ. ಈ ಪೈಕಿ ಓಪನ್‌ಎಐನ ಚಾಟ್‌ಜಿಪಿಟಿ ಬಹುತೇಕರು ಬಳಸುತ್ತಿದ್ದಾರೆ. ಇದೇ ಒಪನ್ ಎಐ ತನ್ನ ವಿಡಿಯೋ ಜನರೇಟರ್ ಸೇವೆ ಸ್ಥಗಿತಗೊಳಿಸಿದೆ.

ಓಪನ್‌ಎಐ ಸಂಸ್ಥೆ ಚಾಟ್‌ಜಿಪಿಟಿ ಹಲವು ಅಪ್‌ಡೇಟ್‌ನೊಂದಿಗೆ ಲಭ್ಯವಿದೆ. ಆದರೆ ವಿಡಿಯೋ ಜನರೇಟರ್ ಸೊರಾ ಆಯಪ್ ಸ್ಥಗಿತಗೊಳಿಸಲಾಗಿದೆ. ಓಪನ್ ಓಐ ದಿಢೀರ್ ಈ ನಿರ್ಧಾರವನ್ನು ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದೆ. ಸೊರಾ ಆಯಪ್ ಸ್ಥಗಿತ ಕುರಿತು ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಟಿಸಿದೆ.

ಓಪನ್ ಎಐ ಇದೀಗ ವಿಡಿಯೋ ಕ್ರಿಯೇಶನ್‌ನಿಂದ ರೊಬೋಟಿಕ್ಸ್ ಹಾಗೂ ಆರ್ಟಿಫೀಶಿಯಲ್ ಜನರಲ್ ಇಂಟಲಿಜೆನ್ಸ್ ಕಡೆ ಹೆಚ್ಚು ಗಮನಕೇಂದ್ರೀಕರಿಸಿದೆ. ಇದರ ಜೊತೆಗೆ ವಿಡಿಯೋ ಕ್ರಿಯೇಶನ್ ವೆಚ್ಚ ದುಬಾರಿಯಾಗುತ್ತಿರುವ ಕಾರಣ ಓಪನ್‌ಎಐ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಸಣ್ಣ ವಿಡಿಯೋ ಸೇರಿದಂತೆ ತಕ್ಷಣಕ್ಕೆ ಚಾಟ್‌ಜಿಪಿಟಿ ಕೂಡ ಬಳಕೆದಾರರಿಗೆ ವಿಡಿಯೋ ಸೇವೆ ನೀಡುತ್ತಿತ್ತು. ಸೊರಾ ಸ್ಥಗಿತದಿಂದ ಇನ್ನು ಮುಂದೆ ಚಾಟ್‌ಜಿಪಿಟಿಯಲ್ಲಿ ವಿಡಿಯೋ ಫೀಚರ್ಸ್ ಲಭ್ಯವಿರುವುದಿಲ್ಲ. ಸೊರಾ ಸ್ಥಗಿತದಿಂದ ಡಿಸ್ನಿ ಜೊತೆಗಿನ ಡೀಲ್ ಕೂಡ ಮುರಿದು ಬಿದ್ದಿದೆ.

ಸೊರಾ ಆಯಪ್ ಸ್ಥಗಿತ ಘೋಷಣೆಯಾಗಿದೆ. ಇದೀಗ ಕಂಪನಿ ಶೀಘ್ರದಲ್ಲೇ ಸೊರಾ ಬಳಸಿ ಸೃಷ್ಟಿಸಿರುವ ಎಐ ವಿಡಿಯೋಗಳನ್ನು ಸೇವ್ ಮಾಡುವುದು ಹೇಗೆ, ಉಳಿಸಿಕೊಳ್ಳುವುದು ಹೇಗೆ ಅನ್ನೋ ಕುರಿತು ಮಾರ್ಗಸೂಚಿ ನೀಡಲಿದೆ. ಸೊರಾ ಆಯಪ್ ಹಾಗೂ ಎಪಿಐ ಸಂಪೂರ್ಣ ಸ್ಥಗಿತ ಕುರಿತು ಮಾಹಿತಿ ನೀಡಲಿದೆ.

ಸೊರಾ ವಿಡಿಯೋ ಸೇವ್ ಕುರಿತು ಕಂಪನಿ ಮಾಹಿತಿ


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries