ಮಂಜೇಶ್ವರ: ಸಂಬಂಧಿಕರ ಮನೆಗೆ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕೊಯಿಪ್ಪಾಡಿ ಗ್ರಾಮದ ಮುಜುಂಗಾವು ಕಾವಿ ಕನ್ನಿಮೂಲ ನಿವಾಸಿ ನಾರಾಯಣ ಎಂಬವರ ಪುತ್ರ ಈಶ್ವರ ಎಂ (42) ನಾಪತ್ತೆಯಾಗಿದ್ದು, ಇವರ ಪತ್ನಿ ಮೋಹಿನಿ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ.
ಬಾಯಾರು ಸನಿಹದ ಪೆಲ್ಲಡ್ಕದಲ್ಲಿರುವ ಸಂಬಂಧಿಕರ ಮನೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಈಶ್ವರ ಅವರು ಏ. 1ರಂದು ತೆರಳಿದ್ದು, 5ರಂದು ಸಂಜೆ ಅಲ್ಲಿಂದ ನಾಪತ್ತೆಯಾಗಿದ್ದಾರೆ. ವಿವಿಧೆಡೆ ಹುಡುಕಿದರೂ ಪತ್ತೆಹಚ್ಚಲಾಗಿಲ್ಲ ಎಂದು ಪತ್ನಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

