HEALTH TIPS

ಕೇರಳ ವಿಧಾನಸಭಾ ಚುನಾವಣೆ-ಬಹಿರಂಗ ಪ್ರಚಾರಕ್ಕೆ ತೆರೆ; ಚುನಾವಣೆಗೆ ಸಜ್ಜುಗೊಂಡ ಜಿಲ್ಲೆ

ಕಾಸರಗೋಡು: ವಿಧಾನಸಭಾ ಚುನಾವಣೆಯ ಬಹಿರಂಗಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆಬಿದ್ದಿದ್ದು, ಇನ್ನು ಮುಖತ: ಭೇಟಿ, ಮನೆ ಸಂದರ್ಶನಕ್ಕಷ್ಟೆ ಪ್ರಚಾರ ಸೀಮಿತವಾಗಲಿದೆ. ಮುಂದಿನ 48ತಾಸುಗಳ ಕಾಲ ಮನೆ ಸಂದರ್ಶನ ಸೇರಿದಂತೆ ಸಾಮಾನ್ಯ ಪ್ರಚಾರ ಕಾರ್ಯಕ್ಕೆ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಸಜ್ಜಾಗಲಿದ್ದಾರೆ. ಕೇರಳದ 140ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಎಡರಂಗ, ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಹಾಗೂ ಬಿಜೆಪಿ ನತೃತ್ವದ ಎನ್‍ಡಿಎ ಒಕ್ಕೂಟ ಪ್ರಮುಖವಗಿ ಸೆಣಸಾಡಲಿದೆ. 

(ಎನ್‍ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಅವರ ಪರವಾಗಿ ಕೊಟ್ಟುಕಲಾಶ ಕಾಸರಗೋಡು ನಗರದಲ್ಲಿನಡೆಯಿತು.) 

ಚುನಾವಣೆಗೆ ಸಜ್ಜು:

ವಿಧಾನಸಭಾ ಚುನಾವಣೆಗೆ ಸಿದ್ಧತೆ ಪೂರ್ಣಗೊಂಡಿದ್ದು,  ಐದು ಚುನಾವಣಾ ಅಧಿಕಾರಿಗಳು, ಉಪ ಚುನಾವಣಾ ಅಧಿಕಾರಿಗಳು, 23 ವಿವಿಧ ನೋಡಲ್ ಅಧಿಕಾರಿಗಳು ಮತ್ತು ಇತರರು ಚುನಾವಣಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಏಪ್ರಿಲ್ 9 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. 

ಇದಕ್ಕೂ ಮೊದಲು ಕಲ್ಪಿತ ಮತದಾನ ಆರಂಭವಾಗಲಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮತದಾನದ ದಿನದಂದು ಮುಚ್ಚಿರಲಿದೆ. ಮತಗಟ್ಟೆಯೊಳಗೆ ಮೊಬೈಲ್ ಫೆÇೀನ್ ಕೊಂಡೊಯ್ಯಲು ನಿಷೇಧವಿರುವುದರಿಂದ ಎಲ್ಲಾ ಮತಗಟ್ಟೆಗಳಲ್ಲಿ ಮೊಬೈಲ್ ಫೆÇೀನ್‍ಗಳನ್ನು ಇರಿಸಲು ಪೌಚ್‍ಗಳ ವ್ಯವಸ್ಥೆ ಮಾಡಲಾಗುವುದು. ಎಲ್ಲಾ ಮತಗಟ್ಟೆಯ ಒಳಗೆ ಮತ್ತು ಹೊರಗೆ ಕ್ಯಾಮೆರಾಗಳೊಂದಿಗೆ ವೆಬ್‍ಕಾಸ್ಟಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು. ಜಿಲ್ಲೆಯಲ್ಲಿ ಐದು ಪಿಂಕ್ ಮತಗಟ್ಟೆಗಳಿದ್ದು, ಅವುಗಳಲ್ಲಿ ಕೇವಲ ಮಹಿಳಾ ಮತಗಟ್ಟೆ ಅಧಿಕಾರಿಗಳು ಮತ್ತು ಒಂದು ಅಂಗವಿಕಲ ಸ್ನೇಹಿ ಮತಗಟ್ಟೆ ಇರಲಿದೆ. ಶೇ. 20ರಷ್ಟು ರಿಸರ್ವ್ ಸೇರಿದಂತೆ 5504 ಮತಗಟ್ಟೆ ಅಧಿಕಾರಿಗಳನ್ನು   ನಿಯೋಜಿಸಲಾಗಿದೆ.  

(ಉದುಮ ಐಕ್ಯರಂಗ ಅಬ್ಯರ್ಥಿ ಕೆ. ನೀಲಕಂಠನ್ ಅವರ ಪರವಾಗಿ ಕೊಟ್ಟುಕಲಾಶ ನಡೆಯಿಯಿ. )

ಜಿಲ್ಲೆಯಲ್ಲಿ ಒಟ್ಟು 11,03,618 ಮತದಾರರು:

ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು11,03,618 ಮತದಾರರಿದ್ದು, ಇವರಲ್ಲಿ 5,44,543 ಪುರುಷರು, 5,59,063 ಮಹಿಳೆಯರು ಮತ್ತು 12 ಟ್ರಾನ್ಸ್ಜೆಂಡರ್‍ಗಳು ಒಳಗೊಂಡಿದ್ದಾರೆ. 

ಮಂಜೇಶ್ವರ ಕ್ಷೇತ್ರದಲ್ಲಿ 115801 ಮಂದಿ ಪುರುಷ, 114312 ಮಂದಿ ಮಹಿಳೆಯರು  ಸೇರಿದಂತೆ ಒಟ್ಟು 230113 ಮತದಾರರಿದ್ದಾರೆ. ಕಾಸರಗೋಡು ಕ್ಷೇತ್ರದಲ್ಲಿ 105524 ಮಂದಿ ಪುರುಷರು, 105399ಮಂದಿ ಮಹಿಳೆಯರು ಸೇರಿದಂತೆ  210923ಮಂದಿ ಮತದಾರರಿದ್ದಾರೆ. ಉದುಮ ಕ್ಷೇತ್ರದಲ್ಲಿ 112166ಮಂದಿ ಪುರುಷರು,   116342ಮಂದಿ ಮಹಿಳೆಯರು,  4ಮಂದಿ ಟ್ರಾನ್ಸ್‍ಜೆಂಡರ್‍ಗಳು ಒಳಗೊಂಡಂತೆ ಒಟ್ಟು 228512ಮಂದಿ ಮತದಾರರಿದ್ದಾರೆ.

ಕಾಞಂಗಾಡಿನಲ್ಲಿ 109008ಮಂದಿ ಪುರುಷ,  114966ಮಂದಿ ಮಹಿಳೆಯರು,  6ಮಂದಿ ಟ್ರಾನ್ಸ್‍ಜೆಂಡರ್‍ಗಳು ಸೇರಿದಂತೆ 223980ಮಂದಿ ಇದ್ದಾರೆ. ತ್ರಿಕರಿಪುರ ಕ್ಷೇತ್ರದಲ್ಲಿ 102044ಮಂದಿಪುರುಷ,  108044ಮಂದಿ ಮಹಿಳೆಯರು,  ಇಬ್ಬರು ಟ್ರಾನ್ಸ್‍ಜೆಂಡರ್‍ಗಳು ಸೇರಿದಂತೆ 210090ಮಂದಿ ಮತದಾರಿದ್ದಾರೆ.

ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 32 ಅಭ್ಯರ್ಥಿಗಳು ಕಣದಲ್ಲಿದ್ದು, ಮಂಜೇಶ್ವರ ಕ್ಷೇತ್ರದಲ್ಲಿ ಅತಿ ಹೆಚ್ಚು 11ಮಂದಿ,   ಕಾಂಞಂಗಾಡ್ ಕ್ಷೇತ್ರದಲ್ಲಿ ಅತಿ ಕಡಿಮೆ ನಾಲ್ಕು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಸರಗೋಡು ಕ್ಷೇತ್ರದಲ್ಲಿ ಐದು ಮಂದಿ ಅಭ್ಯರ್ಥಿಗಳು, ಉದುಮ ಕ್ಷೇತ್ರದಲ್ಲಿ ಆರು ಮಂದಿ, ತ್ರಿಕರಿಪುರ ಕ್ಷೇತ್ರದಲ್ಲಿ ಆರು ಮಂದಿ ಅಭ್ಯರ್ಥಿಗಳಿದ್ದಾರೆ.

ಜಿಲ್ಲೆಯಾದ್ಯಂತ 1992 ಮಂದಿ ಪೆÇಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.  

(ಉದುಮ ಕ್ಷೇತ್ರದ ಎಡರಂಗ ಅಭ್ಯರ್ಥಿ ವಕೀಲ ಸಿ.ಎಚ್ ಕುಞಂಬು ಅವರ ಪರವಾಗಿ ಉದುಮದಲ್ಲಿಕೊಟುಕಲಾಶ ನಡೆಯಿತು.)



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries