HEALTH TIPS

ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುವವರೊಂದಿಗೆ ಪಿಣರಾಯಿ ವಿಜಯನ್ ಶಾಮೀಲು: ರಾಹುಲ್

 ಇಡುಕ್ಕಿ/ಆಲಪ್ಪುಳ/ತಿರುವಳ್ಳ: 'ಎಲ್‌ಡಿಎಫ್‌ ಎಂದರೆ, ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌. ನಿಜ ಹೇಳುತ್ತೇನೆ, ಈಗ ಎಲ್‌ಡಿಎಫ್‌ನಲ್ಲಿ ಎಡಪಂಥೀಯವಾದ ಎಂಬುದೇನೂ ಉಳಿದಿಲ್ಲ. ಚುನಾವಣೆ ನಂತರವಂತೂ ಏನೂ ಉಳಿಯುವುದಿಲ್ಲ. ‍ಪಕ್ಷದೊಳಗೆ ಕಾಣದ ಕೈಗಳಿದ್ದಾವೆ. ಆ ಕೈಗಳು ಕೋಮುವಾದಿಯಾದವು, ಸಂವಿಧಾನವನ್ನು ಒಪ್ಪದಿರುವುದಂಥವು, ಜನರನ್ನು ವಿಭಜಿಸಿ ಜನರ ಮಧ್ಯೆ ದ್ವೇಷ ತುಂಬುವಂಥವು.

ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಸಿಪಿಎಂನ ಸಂಪರ್ಕವನ್ನು ರಾಜ್ಯದ ಜನರು ನೋಡುತ್ತಿದ್ದಾರೆ...'


ಹೀಗೆ ಹೇಳಿದ್ದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ. ಕೇರಳದ ವಿವಿಧೆಡೆ ಅವರು ಶನಿವಾರ ಪ್ರಚಾರ ಸಭೆಗಳನ್ನು ನಡೆಸಿದರು. 'ಯುಡಿಎಫ್‌ ಮತ್ತು ಎಲ್‌ಡಿಎಫ್‌ ಹಲವು ವರ್ಷಗಳಿಂದಲೂ ವಿರೋಧಿಗಳು. ಅವರು ನಮ್ಮ ವಿರೋಧಿಯಾಗಿದ್ದರೂ ಈ ಹಿಂದೆ ಎಲ್‌ಡಿಎಫ್‌ ಎಡಪಂಥೀಯವಾದಿ ಚಿಂತನೆಗಳಿಂದ ಕೂಡಿತ್ತು. ಆದರೆ, ಈಗ ಬಿಜೆಪಿಯಂತೆ ಕಾರ್ಪೊರೇಟ್‌ ಪಕ್ಷವಾಗಿದೆ' ಎಂದು ದೂರಿದರು.

'ಎಲ್‌ಡಿಎಫ್‌ನಲ್ಲಿ ಎರಡು ವಿಧದ ನಾಯಕರಿದ್ದಾರೆ. ಒಂದು ವಿಧದ ನಾಯಕರಿಗೆ ಅಧಿಕಾರ ಬೇಕು. ಇದಕ್ಕಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ಸಹಕಾರ ಪಡೆದುಕೊಳ್ಳುವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನೊಂದು ವಿಧದ ನಾಯಕರು ಕಠಿಣ ಪರಿಶ್ರಮಿಗಳು. ವರ್ಷಾನುಗಟ್ಟಲೆಯಿಂದ ಪಕ್ಷಕ್ಕಾಗಿ ದುಡಿದು, ಈಗ 'ಮೋಸಹೋದ' ಭಾವದಲ್ಲಿದ್ದಾರೆ. ಪಕ್ಷ ಹೋಗುತ್ತಿರುವ ದಿಕ್ಕಿನ ಬಗ್ಗೆ ಬೇಸರಗೊಂಡಿದ್ದಾರೆ' ಎಂದರು.

'ಇವರು ನಿಜವಾಗಿ ಎಡರಂಗವೇ ಆಗಿದ್ದರೆ, ರಾಜ್ಯದಲ್ಲಿ ನೆಡುತೋಪು ಕ್ಷೇತ್ರ ಮತ್ತು ಇಲ್ಲಿ ದುಡಿಯುವ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿರಲಿಲ್ಲ. ಸಾವಿರಾರು ಕುಟುಂಬಗಳಿಗೆ ಭೂಮಿಯ ಹಕ್ಕನ್ನೂ ನಿರಾಕರಿಸಲಾಗಿದೆ. ಎಲ್‌ಡಿಎಫ್‌ನೊಂದಿಗೆ ನಂಟು ಹೊಂದಿಲ್ಲದ ಯುವಕರನ್ನು ಉದ್ಯೋಗಕ್ಕಾಗಿ ಒತ್ತಾಯಪೂರ್ವಕವಾಗಿ ಬೇರೆ ದೇಶಗಳಿಗೆ ದೂಡಲಾಗುತ್ತಿದೆ' ಎಂದು ಆರೋಪಿಸಿದರು.

ಇಂಧನ, ಅನಿಲ ಕೊರತೆ: ಬಿಜೆಪಿಗರು ತಪ್ಪೊಪ್ಪಿಕೊಂಡು ಜನರ ಕ್ಷಮೆ ಕೇಳಲಿ-ಡಿಕೆಶಿಪಿಎನ್‌ಜಿಗೆ ಅರ್ಜಿ ಸಲ್ಲಿಸಿದರೆ ಮಾತ್ರ ಉದ್ಯಮಗಳಿಗೆ ಐPಉ ಪೂರೈಕೆ: ದೆಹಲಿ ಸರ್ಕಾರಹರಿಯಾಣದಲ್ಲಿ ಅಡ್ಡಮತದಾನ: ಐವರು ಕಾಂಗ್ರೆಸ್ ಶಾಸಕರ ಉಚ್ಚಾಟನೆ ಸಾಧ್ಯತೆ?ಧ್ವಂಸಗೊಂಡ ಕ್ಷಿಪಣಿ ಬಂಕರ್‌ಗಳನ್ನು ದುರಸ್ತಿಗೊಳಿಸಿ ದಾಳಿ ನಡೆಸುತ್ತಿದೆ ಇರಾನ್!ವಿ. ಶಿವನ್‌ ಕುಟ್ಟಿ ಕೇರಳ ಶಿಕ್ಷಣ ಸಚಿವರಾಜ್ಯದಲ್ಲಿ ಪ್ರಧಾನಿ ಮೋದಿ ಅವರ ರೋಡ್‌ಶೋಗಳು ಮುಕ್ತಾಯಗೊಂಡಿದ್ದರೆ ಕೇಂದ್ರೀಯ ವಿದ್ಯಾಲಯಗಳ 8 9 ಮತ್ತು 11ನೇ ತರಗತಿಯ ಪಠ್ಯಪುಸ್ತಕಗಳನ್ನು ನೀಡಲು ಅವರು ತಮ್ಮ ಶಿಕ್ಷಣ ಸಚಿವರಿಗೆ ಹೇಳಬೇಕುನರೇಂದ್ರ ಮೋದಿ ಪ್ರಧಾನಿಎಲ್‌ಡಿಎಫ್‌ ಯುಡಿಎಫ್‌ ಇಬ್ಬರು ಪರಸ್ಪರರನ್ನು ಬಿಜೆಪಿಯ 'ಬಿ-ಟೀಂ' ಎಂದು ಆರೋಪಿಸಿಕೊಳ್ಳುತ್ತವೆ. ಆದರೆ ಕೇರಳದಲ್ಲಿ ಬಿಜೆಪಿ 'ಎ-ಟೀಂ' ಆಗಿದೆ. ಈ ಇಬ್ಬರ ಮಧ್ಯೆ ರಹಸ್ಯ ಸ್ನೇಹ ಸಂಬಂಧವಿದೆದರ ಹಿಂದೆ ಎಲ್‌ಡಿಎಫ್‌ ಇದೆ ಸನ್ನಿ ಜೋಸೆಫ್‌ ಕೇರಳ ಕಾಂಗ್ರೆಸ್‌ ಅಧ್ಯಕ್ಷಕಣ್ಣೂರಿನಲ್ಲಿ ಮನೆಯಿಂದಲೇ ಮತಪತ್ರಗಳನ್ನು ಸಂಗ್ರಹಿಸಿದ ಮತಪೆಟ್ಟಿಗೆಯ ಕಿಂಡಿಯು ದೊಡ್ಡದಿವೆ. ಇದರ ಮೂಲಕ ಯಾರು ಬೇಕಿದ್ದರೂ ಮತಪತ್ರಗಳನ್ನು ಹೊರತೆಗೆಯಬಹುದಾಗಿದೆ. ಇ

'ಮೋದಿ ಪಿಣರಾಯಿ ಒಂದೇ'

5-6 ಸಂಸದೆಯರು ಸಂಸತ್ತಿನಲ್ಲಿ ಎದ್ದು ನಿಂತರೆ 'ನನ್ನ ಮೇಲೆ ದಾಳಿ ನಡೆಸುವ ಯತ್ನವಿದು' ಎಂದು ಮೋದಿ ಹೇಳುತ್ತಾರೆ. ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಪಿಣರಾಯಿ ಅವರಿಗೆ ಕಪ್ಪು ಬಾವುಟ ತೋರಿಸಿದ್ದಕ್ಕಾಗಿ ಸಾಯುವಂತೆ ಅವರನ್ನು ಹೊಡೆಯಲಾಗಿದೆ. 'ಇವರು ತನ್ನನ್ನು ಕೊಲ್ಲಲೆಂದೇ ಬಂದಿದ್ದಾರೆ' ಎಂದು ಕಲ್ಪಸಿಕೊಂಡು ಪಿಣರಾಯಿ ಅವರು ದಾಳಿ ನಡೆಸುತ್ತಾರೆ. ಅಧಿಕಾರದ ಮದ ಏರಿರುವುದಕ್ಕೆ ಈ ಇಬ್ಬರೂ ಉದಾಹರಣೆಗಳು.


'ಪಶ್ಚಿಮ ಏಷ್ಯಾ ಬಿಕ್ಕಟು: ಕಾಂಗ್ರೆಸ್‌ನಿಂದ ಪ್ರಚೋದನಕಾರಿ ಹೇಳಿಕೆ'

'ಪಶ್ಚಿಮ ಏಷ್ಯಾದ ದೇಶಗಳೊಂದಿಗೆ ಭಾರತದ ಸಂಬಂಧ ಹಾಳು ಮಾಡುವುದಕ್ಕಾಗಿ ಮತ್ತು ರಾಜಕೀಯವಾಗಿ ನನಗೆ ಹಾನಿ ಮಾಡಲು ಕಾಂಗ್ರೆಸ್‌ 'ಪ್ರಚೋದನಕಾರಿ' ಹೇಳಿಕೆಗಳನ್ನು ನೀಡುತ್ತಿದೆ. ಅವರಿಗೆ ಚುನಾವಣೆ ಗೆಲ್ಲುವುದರ ಬಗ್ಗೆ ಮಾತ್ರವೇ ಚಿಂತೆ' ಎಂದು ನರೇಂದ್ರ ಮೋದಿ ಆರೋಪಿಸಿದರು. ತಿರುವಳ್ಳದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. 'ಚುನಾವಣೆಗಳು ಬರುತ್ತವೆ; ಹೋಗುತ್ತವೆ. ಆದರೆ ಪಶ್ಚಿಮ ಏಷ್ಯಾದ ದೇಶಗಳಲ್ಲಿನ ಭಾರತೀಯರು ವಿಶೇಷವಾಗಿ ಕೇರಳದವರ ಸುರಕ್ಷತೆಯು ನನ್ನ ಆದ್ಯತೆ. ಅಲ್ಲಿಂದ ಎಲ್ಲರನ್ನೂ ಸುರಕ್ಷಿತವಾಗಿ ವಾಪಸು ಕರೆತರಲು ನಾವು ಯತ್ನಿಸುತ್ತಿದ್ದೇವೆ. ಇದು ಕಾಂಗ್ರೆಸ್‌ಗೆ ಬೇಡವಾಗಿದೆ. ಆ ಪಕ್ಷವು ಜನರಲ್ಲಿ ಅನಾವಶ್ಯಕ ಭಯ ಹುಟ್ಟಿಸುತ್ತಿದೆ' ಎಂದರು. 'ಲೋಕಸಭಾ ಕ್ಷೇತ್ರಗಳು ಕಡಿತಗೊಳ್ಳವು' ಕೇರಳ ತಮಿಳುನಾಡು ಕರ್ನಾಟಕ ಆಂಧ್ರ ಪ್ರದೇಶ ಗೋವಾ ತೆಲಂಗಾಣ ರಾಜ್ಯಗಳು ಜನಸಂಖ್ಯೆ ನಿಯಂತ್ರಣದಲ್ಲಿ ಉತ್ತಮ ಕೆಲಸ ಮಾಡಿವೆ. ಜನಸಂಖ್ಯೆ ನಿಯಂತ್ರಣವನ್ನು ಅತ್ಯುತ್ತಮವಾಗಿ ಕೈಗೊಂಡಿರುವುದಕ್ಕಾಗಿಯೇ ದಕ್ಷಿಣದ ಈ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿತಗೊಳ್ಳಲಿದೆ ಎನ್ನುವ ವದಂತಿಯನ್ನು ಹಬ್ಬಿಸಲಾಗುತ್ತಿದೆ. ಇದು ಸಂಪೂರ್ಣ ಸುಳ್ಳು. ಕ್ಷೇತ್ರಗಳ ಸಂಖ್ಯೆ ಕಡಿತಗೊಳ್ಳದಂತೆ ಸಂಸತ್ತು ಕ್ರಮ ಕೈಗೊಳ್ಳಲಿದೆ 

-ನರೇಂದ್ರ ಮೋದಿ 

ಪ್ರಧಾನಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries