ವಿಯೆನ್ನಾ: ದೇಶದ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಅಮೆರಿಕ ಅಥವಾ ಇಸ್ರೇಲ್ ದಾಳಿ ಮಾಡಿದರೆ ಅದು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ 'ಯುದ್ಧಾಪರಾಧ' ಆಗಲಿದೆ ಎಂದು ವಿಶ್ವಸಂಸ್ಥೆಯ ಪರಮಾಣು ಸಂಸ್ಥೆಗೆ ಇರಾನ್‌ನ ರಾಯಭಾರಿ ಗುರುವಾರ ತಿಳಿಸಿದ್ದಾರೆ.
2025ರ ಜೂನ್‌ನಲ್ಲಿ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯ ನಂತರ ವಿಕಿರಣಶೀಲ ಯುರೇನಿಯಂ ಸಂಗ್ರಹವನ್ನು ಇರಾನ್ ಹೆಚ್ಚಿನ ಪ್ರಮಾಣದಲ್ಲಿ ಮಾಡಲು ಪ್ರಾರಂಭಿಸಿದೆ ಎಂಬ ವಾದವನ್ನು ಅವರು ತಳ್ಳಿಹಾಕಿದ್ದಾರೆ.

